ಕರ್ನಾಟಕ

karnataka

ETV Bharat / state

ಕಲಬುರಗಿ ಟು ಮುಂಬೈ : ಶನಿವಾರದಿಂದ ಕೊರೊನಾ ಆರ್ಭಟವಿರೋ ನಗರಗಳ ಮಧ್ಯೆ ವಿಮಾನಯಾನ! - ಕಲಬುರಗಿಯಿಂದ ಮುಂಬೈಗೆ ವಿಮಾನ ಪ್ರಯಾಣ ಆರಂಭ,

ಅಕ್ಷರಶಃ ಆ ಎರಡು ನಗರಗಳಲ್ಲಿ ಕೊರೊನಾ ತಾಂಡವ ನೃತ್ಯ ನಡೆಸಿದೆ. ಆದ್ರೂ ಈ ಎರಡು ನಗರಗಳ ಮಧ್ಯೆ ವಿಮಾನ ಪ್ರಯಾಣ ಶನಿವಾರದಿಂದ ಆರಂಭವಾಗಲಿದೆ.

Kalaburagi to Mumbai flight, Kalaburagi to Mumbai flight start, Kalaburagi to Mumbai flight start from Saturday, ಕಲಬುರಗಿಯಿಂದ ಮುಂಬೈಗೆ ವಿಮಾನ ಪ್ರಯಾಣ,  ಕಲಬುರಗಿಯಿಂದ ಮುಂಬೈಗೆ ವಿಮಾನ ಪ್ರಯಾಣ ಆರಂಭ, ಶನಿವಾರದಿಂದ ಕಲಬುರಗಿಯಿಂದ ಮುಂಬೈಗೆ ವಿಮಾನ ಪ್ರಯಾಣ ಆರಂಭ,
ಸಾಂದರ್ಭಿಕ ಚಿತ್ರ

By

Published : Jun 11, 2020, 10:30 AM IST

ಕಲಬುರಗಿ: ಸ್ಟಾರ್ ಏರ್ ಸಂಸ್ಥೆ ಕಲಬುರಗಿಯಿಂದ ಮುಂಬೈಗೆ ವಿಮಾನ ಹಾರಾಟ ನಡೆಸಲು ನಿರ್ಧರಿಸಿದೆ. ಇದೇ ಶನಿವಾರದಿಂದ ಕಲಬುರಗಿ - ಮುಂಬೈ ನಡುವೆ ವಿಮಾನ ಹಾರಾಟ ಪ್ರಾರಂಭವಾಗುತ್ತಿದೆ.

ಶನಿವಾರದಿಂದ ಕೊರೊನಾ ಆರ್ಭಟ ನಗರಗಳ ಮಧ್ಯೆ ವಿಮಾನಯಾನ

ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ಸಂಸ್ಥೆ‌ ಮುಂದಾಗಿದೆ. ಪ್ರಾರಂಭಿಕ ಹಂತದಲ್ಲಿ ಪ್ರತಿ ಶನಿವಾರದಂದು ವಿಮಾನ ಹಾರಾಟ ನಡೆಸಲು ಉದ್ದೇಶಿಸಲಾಗಿದೆ.

ಇದೇ ಜೂನ್ 13 ರಂದು ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಕಲಬುರಗಿ - ಮುಂಬೈ ನಡುವೆ ಸಂಸ್ಥೆಯ ವಿಮಾನ ಸಂಚರಿಸಲಿದೆ. ಈಗಾಗಲೇ ಬುಕ್ಕಿಂಗ್ ಕೂಡಾ ಆರಂಭಿಸಲಾಗಿದೆ.

OG-118 ಸಂಖ್ಯೆಯ ವಿಮಾನ ಕಲಬುರಗಿಯಿಂದ ಬೆಳಗ್ಗೆ 10.20ಕ್ಕೆ ಹೊರಟು 11.25ಕ್ಕೆ ಬೆಂಗಳೂರು ನಂತರ 1 ಗಂಟೆಗೆ ಬೆಳಗಾವಿ ತಲುಪಲಿದೆ. ಬಳಿಕ ಮಧ್ಯಾಹ್ನ 2.40ಕ್ಕೆ ಮುಂಬೈಗೆ ಲ್ಯಾಂಡ್ ಆಗಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ ನಿರ್ದೇಶಕ ಜ್ಞಾನೇಶ್ವರ ರಾವ್ ತಿಳಿಸಿದ್ದಾರೆ.

ABOUT THE AUTHOR

...view details