ಕರ್ನಾಟಕ

karnataka

ETV Bharat / state

ಕಲಬುರಗಿ ಜನತೆಗೆ ಸಿಹಿ ಸುದ್ದಿ: ಕಲಬುರಗಿ-ಕೊಲ್ಹಾಪುರ ರೈಲು‌ ಸೇವೆಗೆ ಇಂದು ಹಸಿರು ನಿಶಾನೆ - ಕಲಬುರಗಿ ಕೊಲ್ಹಾಪುರ ರೈಲು‌ ಸೇವೆ

ಕಲಬುರಗಿ ಕೊಲ್ಹಾಪುರ ನಡುವಿನ ರೈಲು ಸಂಪರ್ಕ ಇಂದಿನಿಂದ ಆರಂಭವಾಗಲಿದೆ.

Representative image
ಸಾಂದರ್ಭಿಕ ಚಿತ್ರ

By

Published : Sep 16, 2022, 8:53 AM IST

Updated : Sep 16, 2022, 9:37 AM IST

ಕಲಬುರಗಿ: ಜಿಲ್ಲೆಯ ಜನರ ಹಲವು ವರ್ಷಗಳ ಕನಸು ಕಡೆಗೂ ನನಸಾಗಿದೆ. ಕಲಬುರಗಿ-ಕೊಲ್ಹಾಪುರ ನಡುವಿನ ರೈಲು ಸಂಪರ್ಕ ಆರಂಭಗೊಳ್ಳುತ್ತಿದೆ. ಇಂದು (ಶುಕ್ರವಾರ) ಬೆಳಗ್ಗೆ 11 ಗಂಟೆ 18 ನಿಮಿಷಕ್ಕೆ ಸರಿಯಾಗಿ ರೈಲು ನಗರದಿಂದ ಕೊಲ್ಹಾಪುರಕ್ಕೆ ಹೊರಡಲಿದೆ.

ಗಾಣಗಾಪುರ ದತ್ತಾತ್ರೇಯ, ಪಂಢರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮಿ ಧಾರ್ಮಿಕ ನಗರಗಳ ನಡುವೆ ರೈಲು ಸಂಪರ್ಕ ಕಲ್ಪಿಸಲು ಜನರು ಹಲವು ದಿನಗಳಿಂದ ಬೇಡಿಕೆಯಿಡುತ್ತಾ ಬಂದಿದ್ದರು.‌ ಇದೀಗ ಸೊಲ್ಲಾಪುರ–ಮೀರಜ್ ಮಧ್ಯೆ ಸಂಚರಿಸುವ ರೈಲನ್ನು ಕಲಬುರಗಿ ಹಾಗೂ ಕೊಲ್ಹಾಪುರದವರೆಗೆ ವಿಸ್ತರಿಸಲಾಗಿದೆ.

ಶುಕ್ರವಾರ ಬೆಳಗ್ಗೆ 11:18 ಗಂಟೆಗೆ ಕಲಬುರಗಿ ರೈಲು ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ರಾವ್ ಸಾಹೇಬ್ ದಾದಾ ರಾವ್ ಪಾಟೀಲ್ ದಾನ್ವೆ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವರು. ಇಂದು ಸಂಜೆ 6-30ಕ್ಕೆ ಕೊಲ್ಹಾಪುರ ತಲುಪಲಿರುವ ರೈಲು, ಮರಳಿ ಕೊಲ್ಹಾಪುರದಿಂದ ರಾತ್ರಿ 8-10ಕ್ಕೆ ಹೊರಟು ನಸುಕಿನ ಜಾವ 3-25ಕ್ಕೆ ಕಲಬುರಗಿಗೆ ತಲುಪಲಿದೆ.

ನಿತ್ಯ ಬೆಳಿಗ್ಗೆ 6.40ಕ್ಕೆ ಹೊರಡುವ ರೈಲು: ಕಲಬುರಗಿ ಕೊಲ್ಹಾಪುರ ನಡುವಿನ ರೈಲು ಪ್ರತಿದಿನ ಸಂಚಾರ ಮಾಡಲಿದೆ. ಮೊದಲ ದಿನ ಮಾತ್ರ ಬೆಳಗ್ಗೆ 11.18 ಕ್ಕೆ ರೈಲು ಸಂಚಾರ ಆರಂಭಿಸಲಿದೆ. ಸೆ.17 ರಿಂದ ನಿತ್ಯ ಬೆಳಗ್ಗೆ 6.40ಕ್ಕೆ ಕಲಬುರಗಿಯಿಂದ ಹೊರಟು ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರ ತಲುಪಲಿದೆ. ಮರಳಿ ಕೊಲ್ಹಾಪುರದಿಂದ ಮಧ್ಯಾಹ್ನ 3ಕ್ಕೆ ಹೊರಟು ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ.

ರೈಲು ಸಂಚರಿಸುವ ಮಾರ್ಗ-ಸಮಯ:ಕಲಬುರಗಿಯಿಂದ ಬೆಳಗ್ಗೆ 6.40ಕ್ಕೆ ರೈಲು ಪ್ರಯಾಣ ಆರಂಭಿಸಲಿದೆ. 7.05ಕ್ಕೆ ಗಾಣಗಾಪುರ, 7.46ಕ್ಕೆ ಅಕ್ಕಲಕೋಟ, 8.25ಕ್ಕೆ ಸೋಲಾಪುರ, 9.30ಕ್ಕೆ ಕುರುಡ್ವಾಡಿ, 10.20ಕ್ಕೆ ಪಂಡರಾಪುರ, 12.45 ಮಿರಜ್, 1.10ಕ್ಕೆ ಜೈಸಿಂಗ್‌ಪುರ, 1.25ಕ್ಕೆ ಹತ್ಕಣಂಗಲೆ 2.15ಕ್ಕೆ ಕೊಲ್ಲಾಪುರ ತಲುಪಲಿದೆ.

ಮಧ್ಯಾಹ್ನ 3 ಗಂಟೆಗೆ ಕೊಲ್ಲಾಪುರದಿಂದ ಹೊರಟ ರೈಲು 3.25ಕ್ಕೆ ಹತ್ಕಣಂಗಲೆ, 3.40ಕ್ಕೆ ಜೈಸಿಂಗ್‌ಪುರ, 4.35ಕ್ಕೆ ಮೀರಜ್, 6.45ಕ್ಕೆ ಪಂಡರಪುರ, 7.40ಕ್ಕೆ ಕುರುಡ್ವಾಡಿ, 8.55ಕ್ಕೆ ಸೋಲಾಪುರ, 9.32ಕ್ಕೆ ಅಕ್ಕಲಕೋಟ, 10.10ಕ್ಕೆ ಗಾಣಗಾಪುರ, ರಾತ್ರಿ 10.45 ಕ್ಕೆ ಕಲಬುರಗಿ ತಲುಪಲಿದೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಶ್ರಮಿಕ್ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನಕ್ಕೆ ಚಾಲನೆ

Last Updated : Sep 16, 2022, 9:37 AM IST

ABOUT THE AUTHOR

...view details