ಕರ್ನಾಟಕ

karnataka

ETV Bharat / state

ಸಕಾಲಕ್ಕೆ ಬಾರದ ಬಸ್: 4ಕಿ.ಮೀ ದೂರ ನಡೆದು ವಿದ್ಯಾರ್ಥಿಗಳ ಪ್ರತಿಭಟನೆ - students protest

ಬಸ್ ಸಮಸ್ಯೆ-ಬಸ್​ಗಾಗಿ ವಿದ್ಯಾರ್ಥಿಗಳ ಪರದಾಟ-ನಾಲ್ಕು ಕಿಲೋಮೀಟರ್ ದೂರ ನಡೆದ ಮಕ್ಕಳು-ಅರ್ಧ ದಾರಿಯಲ್ಲಿ ಸಿಕ್ಕ ಬಸ್ ತಡೆದು ಪ್ರತಿಭಟನೆ

kalaburagi students protest over bus problem
ಕಲಬುರಗಿ ವಿದ್ಯಾರ್ಥಿಗಳ ಪ್ರತಿಭಟನೆ

By

Published : Jul 9, 2022, 12:20 PM IST

ಕಲಬುರಗಿ: ಶಾಸಕ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಕ್ಷೇತ್ರದಲ್ಲೇ ವಿದ್ಯಾರ್ಥಿಗಳು ಬಸ್​ಗಾಗಿ ಪರದಾಟ ನಡೆಸಿದ್ದಾರೆ. ಸಕಾಲಕ್ಕೆ ಬಸ್​ ಬಾರದ ಹಿನ್ನೆಲೆ, ಸುರಿಯುತ್ತಿರುವ ಭಾರಿ ಮಳೆಯಲ್ಲಿಯೇ ನಾಲ್ಕು ಕಿಲೋಮೀಟರ್ ದೂರ ನಡೆದಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ

ಸೇಡಂ ತಾಲೂಕಿನ ಯಡಗಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಿನ್ನೆ ಶಾಲೆ ಮುಗಿಸಿ ಮನೆಗೆ ತೆರಳಲು ಬಸ್​ಗಾಗಿ ಕಾದು ಕುಳಿತಿದ್ದರು. ಸುಮಾರು ಮೂರ್ನಾಲ್ಕು ಗಂಟೆಯಾದರೂ ಬಸ್ ಬಂದಿರಲಿಲ್ಲ. ಅನಿವಾರ್ಯವಾಗಿ ವಿದ್ಯಾರ್ಥಿಗಳು ನಾಲ್ಕು ಕಿಲೋ ಮೀಟರ್ ಪಾದಯಾತ್ರೆಯಲ್ಲೇ ನಡೆದಿದ್ದಾರೆ. ಕಾಚೂರು ಗ್ರಾಮದ ಬಳಿ ಬಂದ ಬಸ್ ತಡೆದ ವಿದ್ಯಾರ್ಥಿಗಳು ಮಳೆಯಲ್ಲೇ ದಿಢೀರನೇ ಪ್ರತಿಭಟನೆ ನಡೆಸಿದರು. ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಚಾಲಕನ ವರ್ಗಾವಣೆಗೊಳಿಸಿದ್ದಕ್ಕೆ ಐಎಎಸ್ ಅಧಿಕಾರಿಗೇ ಅವಾಜ್​.. ಸಚಿವರ ಆಪ್ತನೆಂದು ಬೆದರಿಕೆ ಹಾಕಿದವ ಅಂದರ್​ ​

ಜೊತೆಗೆ ಕೂಡಲೇ ನಮಗೆ ಬಸ್ ವ್ಯವಸ್ಥೆ ಮಾಡಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಮಳೆಯಲ್ಲಿ ನೆನೆದು ಸುಮಾರು ನಾಲ್ಕೈದು ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸೇಡಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details