ಕಲಬುರಗಿ:ಜಿಲ್ಲೆಯ ಶಹಬಾದ್ ನಗರದಲ್ಲಿ ಬಿಡಾಡಿ ದನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿರುವ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಿಡಾಡಿ ದನಗಳ ಕಳ್ಳತನ: ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ! - Street cow theft caught in cctv,
ನಗರದಲ್ಲಿ ಬಿಡಾಡಿ ದನಗಳ ಕಳ್ಳತನ ಹೆಚ್ಚಾಗುತ್ತಿದೆ. ಮಧ್ಯರಾತ್ರಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಖದೀಮರು ಬಿಡಾಡಿ ದನಗಳನ್ನು ಕದ್ದು ಪರಾರಿಯಾಗಿವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಿಡಾಡಿ ದನಗಳ ಕಳ್ಳತನ, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಬಿಡಾಡಿ ದನಗಳ ಕಳ್ಳತನ, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ನವೆಂಬರ್ 20ರಂದು ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಮಹಾರಾಷ್ಟ್ರ ನೋಂದಣಿ ಹೊಂದಿರುವ ವಾಹನ ದನವನ್ನು ಎಳೆದೊಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಡಾಡಿ ದನಗಳು ಹಾಗೂ ಮನೆಗಳಲ್ಲಿನ ಹಸುಗಳು ಕಳ್ಳತನವಾಗುತ್ತಿವೆ. ಆದ್ರೆ ಇದೀಗ ಕಳ್ಳರ ಕೈಚಳಕ ಬಯಲಾಗಿದೆ. ಶಹಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಲ್ಲಿವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.