ಕರ್ನಾಟಕ

karnataka

ETV Bharat / state

ಅಪರಾಧ ಕೃತ್ಯಗಳ ತಡೆಯಲು ಕಲಬುರಗಿ ಪೊಲೀಸ್​ ಇಲಾಖೆಯಿಂದ ಚಿತಾ ಗಸ್ತು ಆರಂಭ..! - ಕಾನೂನು ಸುವ್ಯವಸ್ಥೆ

ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಪುಂಡ ಪೋಕರಿಗಳ ಹಾಗೂ ಕಳ್ಳರ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆ ಚಿತಾ ವಾಹನ ಗಸ್ತು ಆರಂಭಿಸಿದೆೆ.

Enter here.. Kalaburagi police department
ಅಪರಾಧ ಕೃತ್ಯಗಳ ತಡೆಯಲು ಕಲಬುರಗಿ ಪೊಲೀಸ್​ ಇಲಾಖೆಯಿಂದ ಚಿತಾ ಗಸ್ತು ಆರಂಭ..!

By

Published : Mar 18, 2023, 11:08 PM IST

ಅಪರಾಧ ಕೃತ್ಯಗಳ ತಡೆಯಲು ಕಲಬುರಗಿ ಪೊಲೀಸ್​ ಇಲಾಖೆಯಿಂದ ಚಿತಾ ಗಸ್ತು ಆರಂಭಿಸಲಾಗಿದೆ

ಕಲಬುರಗಿ: ಕಲಬುರಗಿಯಲ್ಲಿ ಎಲ್ಲೇ ಅಪರಾಧಗಳು ನಡೆದರೂ ಇನ್ಮುಂದೆ ಚಿತಾ ವಾಹನ ಬಂದು ನಿಲ್ಲುತ್ತೆ. ಚಿತಾ ಓಡುವ ವೇಗದಲ್ಲಿಯೇ ಅಪರಾಧ ನಡೆದ ಸ್ಥಳಕ್ಕೆ ಈ ವಾಹನ ತಲುಪುತ್ತೆ. ಹೌದು, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಪುಂಡ ಪೋಕರಿಗಳ ಹಾಗೂ ಕಳ್ಳರ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆ ಚಿತಾ ವಾಹನ ಗಸ್ತು ಆರಂಭಿಸಿದೆೆ.

ರಾಜ್ಯ ಸರ್ಕಾರದಿಂದ 12 ದ್ವಿಚಕ್ರ ವಾಹನಗಳು‌ ಬಂದಿವೆ. ಅವುಗಳಿಗೆ ಹೊಸ ಟಚ್​ ನೀಡಿ, ಚಿತಾ ವಾಹನಗಳಾಗಿ ಇಲ್ಲಿನ ಪೊಲೀಸ್ ಇಲಾಖೆ ಬದಲಾವಣೆ ಮಾಡಿದೆ. ನಗರದ ಪ್ರತಿಯೊಂದು ಪೊಲೀಸ್ ಠಾಣೆಗೆ ಒಂದರಂತೆ ಚಿತಾ ವಾಹನ ನೀಡಲಾಗಿದೆ. ಬೆಳಿಗ್ಗೆ 5 ರಿಂದ 11 ಗಂಟೆ ಮತ್ತು ಸಾಯಂಕಾಲ 5 ರಿಂದ 11 ರವರೆಗೆ ಚಿತಾ ವಾಹ‌ನ ಗಸ್ತು ಸಂಚಾರ ಮಾಡಲಿದೆ.

ವಾಕಿಂಗ್, ತರಕಾರಿ ಖರೀದಿ, ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ ಓಡಾಡುವರ ಸುರಕ್ಷತೆ ವಹಿಸಲಿದೆ. ಪೊಲೀಸ್ ಠಾಣಾ ವ್ಯಾಪ್ತಿಯ ಆಯಾ ಠಾಣಾ ಸಿಬ್ಬಂದಿ ಬೈಕ್​ನಲ್ಲಿ ಗಸ್ತು ಓಡಾಡಲಿದ್ದಾರೆ. ಈಗಾಗಲೇ ಇಆರ್​ಎಸ್​ಎಸ್​ 112 ಸಂಖ್ಯೆಗೆ ಕರೆ ಬಂದಾಗ, 112 ವಾಹನಗಳ ಪೊಲೀಸರು ಹೋಗ್ತಿದ್ದಾರೆ. ಕರೆ ಬಾರದೇ ಇದ್ರೂ, ಕಾನೂನು ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಕೃತ್ಯ ನಡೆದಾಗ, ಗಸ್ತು ವಾಹನಗಳು ಆ ಸ್ಥಳಕ್ಕೆ ತಲುಪಲಿವೆ. ವಿಶೇಷವಾಗಿ ಶಾಲಾ ಕಾಲೇಜುಗಳ ಬಳಿ ಪಡ್ಡೆ ಹುಡುಗರ ಹಾವಳಿ, ಸರಗಳ್ಳತನ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ನಡೆದಾಗ ಚಿತ್ತಾ ಪ್ರತ್ಯಕ್ಷವಾಗಲಿದೆ. ಜನರಲ್ಲಿ ಧೈರ್ಯ ತುಂಬಲು ಚಿತಾ ವಾಹನಕ್ಕೆ ಸೈರನ್ ಸದ್ದು, ಲೈಟ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಚೇತನ ತಿಳಿಸಿದ್ದಾರೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ:ಇನ್ನೂ ಮಹಿಳಾ ಶಾಲಾ ಕಾಲೇಜು, ವಸತಿ ನಿಲಯಗಳ ಬಳಿ ಕಂಪ್ಲೆಂಟ್ ಬಾಕ್ಸ್ ಇಡಲು ಪೊಲೀಸ್ ಇಲಾಖೆ ನಿರ್ಧಾರ ಮಾಡಿದೆ. ವಸತಿ ನಿಲಯಗಳಿಗೆ ತೆರಳಿ ವಿದ್ಯಾರ್ಥಿಗಳಿಂದ ಮಾಹಿತಿ ಕೂಡಾ ಪಡೆಯಲಾಗುವುದು. ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುವಂತಹ ದೂರುಗಳು ಕೇಳಿ ಬಂದರೆ, ಲೇಡಿ ಪೊಲೀಸರನ್ನು ಮಪ್ತಿಯಲ್ಲಿ ಬಿಟ್ಟು ರೋಡ್ ರೋಮಿಯೋಗಳಿಗೆ ಪಾಠ ಕಲಿಸುವ ಪ್ಲ್ಯಾನ್ ಕೂಡಾ ಪೊಲೀಸರು ಮಾಡಿದ್ದಾರೆ‌. ಇದು ಜನ ಸುರಕ್ಷತಾ ಕ್ರಮಗಳಾದ್ರೆ ವಾಹನ ಸಂಚಾರ ದಟ್ಟಣೆ ತಡೆಯಲು ಪೊಲೀಸರು ಪ್ಲ್ಯಾನ್ ಮಾಡಿ ಕಾರ್ಯ ರೂಪಕ್ಕೆ ತಂದಿದ್ದಾರೆ. ವಾಹನ ಸವಾರರಿಗೆ ದಂಡ ವಿಧಿಸುವ ಬದಲಾಗಿ ಸಿಬ್ಬಂದಿಯನ್ನು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗ್ತಿದೆ.

ನೆಮ್ಮದಿ ವಾತಾವರಣ:ಕೇಂದ್ರ ಬಸ್ಟ್ಯಾಂಡ್ ಹಾಗೂ ರೈಲ್ವೆ ನಿಲ್ದಾಣದಲ್ಲಿ ದಿನದ 24 ಗಂಟೆ ಟ್ರಾಫಿಕ್ ಹಾಗೂ ಸಿವಿಲ್ ಪೊಲೀಸರನ್ನು ನಿಯೋಜನೆ ಮಾಡಲಾಗ್ತಿದೆ. ಅಪರಾಧ ಕೃತ್ಯಗಳು ನಡೆದಾಗ ಸಿವಿಲ್ ಪೊಲೀಸರು, ಸಂಚಾರ ತೊಂದರೆ ತಪ್ಪಿಸಲು ಸಂಚಾರಿ ಪೊಲೀಸ್ರು ಕೆಲಸ ಮಾಡಲಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ಕಳ್ಳ ಪುಂಡ ಪೋಕರಿಗಳ ಹೆಡೆಮುರಿ ಕಟ್ಟಲು ಜೊತೆಗೆ ಟ್ರಾಪಿಕ್ ಸಮಸ್ಸೆ ತಪ್ಪಿಸಲು ಪೊಲೀಸ್ ಕಮಿಷನರ್ ಚೇತನ್ ಪ್ಲ್ಯಾನ್ ಮಾಡಿ, ಕಾರ್ಯಚರಣೆಗೆ ಇಳಿದಿದ್ದು, ಜನರು ಒಂದಿಷ್ಟು ನೆಮ್ಮದಿಯ ಉಸಿರು ಆಡುವಂತ ವಾತಾವರಣ ನಿರ್ಮಾಣವಾಗಿದೆೆ.

ಇದನ್ನೂ ಓದಿ:ಲೋಕಾಯುಕ್ತ ಬಲೆಗೆ ಬಿದ್ದ ಕಲಬುರಗಿ ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ

ABOUT THE AUTHOR

...view details