ಕರ್ನಾಟಕ

karnataka

ETV Bharat / state

ಕಲಬುರಗಿ ಓಪನ್‍ ಟೆನಿಸ್: ಬ್ಯಾಕ್ ಟು ಬ್ಯಾಕ್ ಐಟಿಎಫ್ ಟೈಟಲ್‍ನತ್ತ ರಾಮ್‍ಕುಮಾರ್ - ETV Bharath Kannada news

ಕಲಬುರಗಿ ಓಪನ್‍ ಟೆನಿಸ್​ ನಡೆಯುತ್ತಿದ್ದು ನಾಳೆ (ಭಾನುವಾರ) ಸಿಂಗಲ್ಸ್​ನ ಫೈನಲ್​ ಹಣಾಹಣಿ ನಡೆಯಲಿದೆ.

Ramkumar Ramanathan
ರಾಮ್‍ಕುಮಾರ್ ರಾಮನಾಥನ್

By ETV Bharat Karnataka Team

Published : Dec 2, 2023, 10:25 PM IST

ಕಲಬುರಗಿ: ಭಾರತದ ರಾಮ್‍ಕುಮಾರ್ ರಾಮನಾಥನ್ ಅವರು ಜಪಾನಿನ ರೊಟಾರೋ ತಗುಚಿ ವಿರುದ್ಧ ಭರ್ಜರಿ ಜಯದೊಂದಿಗೆ ಐಟಿಎಫ್ ಕಲಬುರಗಿ ಓಪನ್‍ ಫೈನಲ್‍ಗೆ ತಲುಪುವ ಮೂಲಕ ಬ್ಯಾಕ್ ಟು ಬ್ಯಾಕ್ ಐಟಿಎಫ್ ಟೈಟಲ್ ಮುಡಿಗೇರಿಸಲು ದಾಪುಗಾಲು ಇಟ್ಟಿದ್ದಾರೆ. ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್​​ನಲ್ಲಿ ಕೇವಲ 65 ನಿಮಿಷಗಳಲ್ಲಿ ಜಪಾನಿನ ಆಟಗಾರನ ಸವಾಲನ್ನು ಬದಿಗೊತ್ತಿ 6-2, 6-1 ಅಂತರದಲ್ಲಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದ್ದರು.

ನಾಳೆ ರಾಮ್‍ಕುಮಾರ್ ರಾಮನಾಥನ್ vs ಡೇವಿಡ್ ಪಿಚ್ಲರ್ ಸಿಂಗಲ್ಸ್​ ಫೈನಲ್​​

ಸಿಂಗಲ್ಸ್ ಪ್ರಶಸ್ತಿ ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಭಾರತೀಯ ಆಟಗಾರ ಏಳನೇ ಶ್ರೇಯಾಂಕದ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಅವರನ್ನು ಭಾನುವಾರ ಎದುರಿಸಲಿದ್ದಾರೆ. ಇನ್ನೊಂದು ಉಪಾಂತ್ಯ ಪಂದ್ಯದಲ್ಲಿ ಜಪಾನಿನ ಎರಡನೇ ಶ್ರೇಯಾಂಕದ ರೂಕಿ ಮತ್ಸುದಾ ವಿರುದ್ಧ 6-2, 6-4 ಅಂತರದಲ್ಲಿ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಜಯ ಸಾಧಿಸಿದರು.

ಡಬಲ್ಸ್ ಪ್ರಶಸ್ತಿಗೆ ಮುತ್ತಿಟ್ಟ ಜಪಾನ್ ಜೋಡಿ:ಡಬಲ್ಸ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ತಗುಚಿ - ಮತ್ಸುದಾ ಜೋಡಿ ಡಬಲ್ಸ್ ಕಿರೀಟವನ್ನು ಎತ್ತಿ ಹಿಡಿದರು. ಜಪಾನ್ ಜೋಡಿಯು ಇಂಡೋ-ಆಸ್ಟ್ರಿಯನ್ ಜೋಡಿಯಾದ ನಿತಿನ್ ಕುಮಾರ್ ಸಿನ್ಹಾ ಮತ್ತು ಡೇವಿಡ್ ಪಿಚ್ಲರ್ ವಿರುದ್ಧ 6-4, 2-6, 10-7 ರಲ್ಲಿ ಮೇಲುಗೈ ಸಾಧಿಸಿ 1,550 ಡಾಲರ್ ಜೊತೆಗೆ ತಲಾ 25 ಎಟಿಪಿ ಪಾಯಿಂಟ್‍ಗಳನ್ನು ಪಡೆದರು. ಎರಡನೇ ಸ್ಥಾನ ಪಡೆದ ಇಂಡೋ-ಆಸ್ಟ್ರಿಯನ್ ಜೋಡಿ 900 ಡಾಲರ್ ಮತ್ತು ತಲಾ 16 ಎಟಿಪಿ ಅಂಕ ಗಳಿಸಿದರು.

ರಾಮನಾಥನ್ ಆಟ ಹೀಗಿತ್ತು:ಕಳೆದ ವಾರ ಐಟಿಎಫ್ ಮುಂಬೈ ಓಪನ್ ಟೈಟಲ್ ಗೆದ್ದಿರುವ ರಾಮ್‍ಕುಮಾರ್ ಮತ್ತೆ ಪ್ರಶಸ್ತಿಯತ್ತ ಕಣ್ಣಿಟ್ಟಿದ್ದಾರೆ. ಮೊದಲ ಐದು ಗೇಮ್‍ಗಳು ಸರ್ವ್‍ನೊಂದಿಗೆ ಸಾಗಿದವು. ಆರನೇ ಗೇಮ್‍ನಲ್ಲಿ ಜಪಾನಿನ ಆಟಗಾರ ಸರ್ವ್ ಕಳೆದುಕೊಂಡರು. ಇದು 29 ವರ್ಷದ ಭಾರತೀಯ ಆಟಗಾರನ ಆತ್ಮವಿಶ್ವಾಸ ಹೆಚ್ಚಿಸಿತು. ದೊಡ್ಡ ಸರ್ವ್‍ನೊಂದಿಗೆ 7ನೇ ಗೇಮ್ ಗೆದ್ದಿದ್ದಲ್ಲದೇ ಎಂಟನೇ ಗೇಮ್‍ನಲ್ಲಿ ಸುದೀರ್ಘ ಹೋರಾಟದ ನಂತರ ರೊಟಾರೋ ತಗುಚಿ ಅವರ ಸರ್ವ್ ಬ್ರೆಕ್ ಮಾಡಿ 6-2 ರಿಂದ ಮೊದಲ ಸೆಟ್ ವಶಪಡಿಸಿಕೊಂಡರು.

ಭಾರತೀಯ ಡೇವಿಸ್ ಕಪ್ ತಂಡದ ಸದಸ್ಯ ಮತ್ತು ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ರಾಮನಾಥನ್ ಎರಡನೇ ಸೆಟ್‍ನಲ್ಲಿ ಇನ್ನಷ್ಟು ಉತ್ತಮವಾದ ಪ್ರದರ್ಶನ ತೋರಿದರು. ಅಂಗಳದಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಜಪಾನಿ ಆಟಗಾರ ಎರಡನೇ ಗೇಮ್‍ನಲ್ಲಿ ಸರ್ವ್ ಉಳಿಸಿಕೊಳ್ಳಲು ಯಶಕಂಡರಾದರು ರಾಮ್‍ಕುಮಾರ್ ಅವರ ಪ್ರಭಾವಶಾಲಿ ಪ್ರದರ್ಶನಕ್ಕೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದು ವಾರಾಂತ್ಯದ ಪ್ರೇಕ್ಷಕರನ್ನು ಪಂದ್ಯದಲ್ಲಿ ಉನ್ಮಾದದಲ್ಲಿರಿಸಿತ್ತು. ತಗೂಚಿ ಅವರ 4 ಗೇಮ್ ಬ್ರೆಕ್ ಮಾಡಿ ಅಂತಿಮವಾಗಿ ರಾಮಕುಮಾರ್ ಅವರು ಎರಡನೇ ಸೆಟ್ 6-1ರಿಂದ ಗೆದ್ದು ನಗೆ ಬೀರಿದರು.

ಕಲಬುರಗಿ ಓಪನ್‍ ಟೆನಿಸ್​ ಡಬಲ್ಸ್​ ಪ್ರಶಸ್ತಿ ವಿಜೇತ ಜೋಡಿಗಳು

ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ, ಪಿಚ್ಲರ್ ಮೊದಲ ಮತ್ತು ಮೂರನೇ ಗೇಮ್‍ಗಳಲ್ಲಿ ಸರ್ವಿಸ್ ಬ್ರೆಕ್ ಗೆದ್ದು 4-0 ಲೀಡ್ ತೆಗೆದುಕೊಂಡರು. ಮೊದಲನೇ ಸೆಟ್​​ನಲ್ಲೀ ಆಸ್ಟ್ರಿಯನ್ ಆಟಗಾರ 6-2 ರಿಂದ ಗೆದ್ದರು ಸಹ ಸೆಟ್‍ನ ಉಳಿದ ಭಾಗಗಳಲ್ಲಿ ಉಭಯ ಎದುರಾಳಿಗಳು ತಮ್ಮ ಸರ್ವ್​ಗಳನ್ನು ಹಿಡಿದಿಟ್ಟುಕೊಂಡರು. ಎರಡನೇ ಸೆಟ್‍ನಲ್ಲಿ ಅಲ್ಪಾವಧಿಯ ಫಾರ್ಮ್‍ಗೆ ಮರಳಿದ ರೂಕಿ ಮತ್ಸುದಾ ಮೂರನೇ ಗೇಮ್‍ನಲ್ಲಿ ತನ್ನ ಸರ್ವ್ ಕಳೆದುಕೊಂಡರು. ನಂತರ ಗೇಮ್‍ನಲ್ಲಿ ಲೆವೆಲ್‍ಗೆ ಹಿಂತಿರುಗಿದರಾದರು ಏಳನೇ ಗೇಮ್ ಬ್ರೆಕ್ ಸಾಧಿಸಿದ ಪಿಚ್ಲರ್ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಅಂತಿಮವಾಗಿ 6-4 ರಲ್ಲಿ ಸೆಟ್ ಗೆದ್ದು ಫೈನಲ್‍ಗೆ ಎಂಟ್ರಿ ಕೊಟ್ಟರು.

ಇದನ್ನೂ ಓದಿ:ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಇಂದು ಚಾಲನೆ

ABOUT THE AUTHOR

...view details