ಕಲಬುರಗಿ:ಮಹಾನಗರ ಪಾಲಿಕೆ ಚುನಾವಣಾ ಕಣ ರಂಗೇರುತ್ತಿದೆ. ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ, ಇಂದು ಕಾಂಗ್ರೆಸ್ ಸಹ ತನ್ನ ಕ್ಯಾಂಡಿಡೇಟ್ ಲಿಸ್ಟ್ ರೀಲಿಸ್ ಮಾಡಿ ಅಖಾಡಕ್ಕೆ ಧುಮುಕಿದೆ. ಒಮ್ಮೆಯೂ ಪಾಲಿಕೆಯ ಚುಕ್ಕಾಣಿ ಹಿಡಿಯದ ಕಮಲಪಾಳಯ, ಈ ಬಾರಿ ಶತಾಯಗತಾಯವಾಗಿ ಗದ್ದುಗೆ ಏರಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ.
ಕಳೆದ ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದೀಗ ಎರಡು ಪ್ರಮುಖ ಪಕ್ಷಗಳ ಮಧ್ಯ ಪೈಪೋಟಿ ಶರುವಾಗಿದೆ. 55 ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆಗೆ ಕಳೆದ ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಕೆ ಚುನಾವಣೆ ಬಿಜೆಪಿ ಉಸ್ತುವಾರಿ ಎನ್ ರವಿಕುಮಾರ್ ರಿಲೀಸ್ ಮಾಡಿದ್ದರು. ಅದರಂತೆ ಇಂದು ಬಿಜೆಪಿ ಹಲವಾರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ವೇಳೆ ಮಾತಾನಾಡಿದ ಎನ್. ರವಿಕುಮಾರ್, ನರೇಂದ್ರ ಮೋದಿ ಅವರ ಜನಪರ ಆಡಳಿತ ಹಾಗೂ ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪರ ಆಡಳಿತದ ಯೋಜನೆಗಳಿಂದ ಈ ಬಾರಿ ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆಯನ್ನ ಈ ಭಾರಿ ಕಮಲ ಪಕ್ಷ ಖಂಡಿತವಾಗಿ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.