ಕರ್ನಾಟಕ

karnataka

ETV Bharat / state

ಕಲ್ಲುಗಣಿಗಾರಿಕೆಗೆ ಕಂಗಾಲಾದ ಯಲಕಪಲ್ಲಿ ಗ್ರಾಮಸ್ಥರು: ಜಲ್ಲಿಕಲ್ಲು ಯಂತ್ರ ಸ್ಥಳಾಂತರಕ್ಕೆ ಆಗ್ರಹ - undefined

ಕಾನೂನು ಬಾಹಿರವಾಗಿ ಹಗಲು-ರಾತ್ರಿ ಕಲ್ಲುಗಣಿಗಾರಿಕೆಗಾಗಿ  ಲೆಕ್ಕವೇ ಇಲ್ಲದಷ್ಟು ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಅಕ್ರಮವಾಗಿ 40 ರಿಂದ 50 ಅಡಿ ಆಳ ಭೂಮಿ ಕೊರೆದು ಬ್ಲಾಸ್ಟಿಂಗ್ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಗಣಿಗಾರಿಕೆ ವಿರೋಧಿಸಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

By

Published : Jun 15, 2019, 6:02 AM IST

ಕಲಬುರಗಿ: ಚಿಂಚೋಳಿ ತಾಲೂಕಿನ ಯಲಕಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹಗಲು ರಾತ್ರಿಯೆನ್ನದೆ ಗಣಿಯಲ್ಲಿ ಬ್ಲಾಸ್ಟಿಂಗ್ ಮಾಡುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಅಕ್ರಮ ಗಣಿಗಾರಿಕೆ

ಕಾನೂನು ಬಾಹಿರವಾಗಿ ಹಗಲು-ರಾತ್ರಿ ಕಲ್ಲುಗಣಿಗಾರಿಕೆಗಾಗಿ ಲೆಕ್ಕವೇ ಇಲ್ಲದಷ್ಟು ಸ್ಫೋಟ ಮಾಡಲಾಗುತ್ತಿದೆ. ಅಕ್ರಮವಾಗಿ 40 ರಿಂದ 50 ಅಡಿ ಆಳ ಭೂಮಿ ಕೊರೆದು ಸ್ಫೋಟ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಅಲ್ಲದೆ ಜನರ ಮನೆ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಯಲಕಪಲ್ಲಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆದಿದೆ. ಕಳೆದ 12 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಾಡಿದ ಸ್ಫೋಟದಿಂದ ಗ್ರಾಮದಲ್ಲಿ ಭೂಕಂಪದ ಅನುಭವವಾಗಿದೆ.

ಸ್ಫೋಟದಿಂದ ಗ್ರಾಮದಲ್ಲಿನ ಮನೆಗಳು ಬಿರುಕು ಬಿಟ್ಟಿದ್ದು, ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಉಪಯೋಗವಾಗಿಲ್ಲ, ತಕ್ಷಣ ಜಲ್ಲಿ ಕಲ್ಲು ಅಕ್ರಮ ಗಣಿಗಾರಿಕೆ ನಿಲ್ಲಿಸಿ ಯಂತ್ರಗಳನ್ನು ಸ್ಥಳಾಂತರಿಸಬೇಕು ಎಂದು ಯಲಕಪಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

Kalaburagi

ABOUT THE AUTHOR

...view details