ಕಲಬುರಗಿ:ತೆಲಂಗಾಣದ ಜಹೀರಾಬಾದ್ ತಾಲೂಕಿನ ಶಶಿಕಲಾ ಮಾತೆ ಎಂಬುವವರು ನವೆಂಬರ್ 11ರಂದು ಧನುಶ್ರೀ ಗ್ರಾಮದ ಭವಾನಿ ದೇವಸ್ಥಾನದಿಂದ ಉರುಳು ಸೇವೆ ಪ್ರಾರಂಭಿಸಿದ್ದರು. ತಮ್ಮ ಗ್ರಾಮದಿಂದ ಸುಮಾರು 300 ಕಿಲೋ ಮೀಟರ್ ಅಂತರದಲ್ಲಿರುವ ಕರ್ನಾಟಕದ ಕಲಬುರಗಿ ಜಿಲ್ಲೆಯ ಘತ್ತರಗಿ ಭಾಗಮ್ಮ ದೇಗುಲದವರೆಗೆ ಉರುಳು ಸೇವೆ ಹರಕೆ ಹೊತ್ತಿದ್ದರು. ಈಗ ಬೀದರ್, ಹುಮ್ನಾಬಾದ್ ಮಾರ್ಗವಾಗಿ ಕಲಬುರಗಿ ನಗರವನ್ನು ತಲುಪಿದ್ದಾರೆ.
ಉರಳು ಸೇವೆಯಲ್ಲಿ ಮಾತೆ ಅವರ ಜೊತೆ ನೂರಾರು ಭಕ್ತರು ಭಜನೆ, ಕಿರ್ತನೆಗಳನ್ನು ಜಪಿಸುತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜ್ಜೆ ಹಾಕಿದರು. ಕಲಬುರಗಿ ನಗರಲ್ಲಿ ಶಶಿಕಲಾ ಮಾತೆಯನ್ನು ಭಕ್ತರು ಭವ್ಯವಾಗಿ ಸ್ವಾಗತಿಸಿದರು.