ಕಲಬುರಗಿ: ಸಾಕು ನಾಯಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಅದರ ಒಡನಾಟ, ಪ್ರೀತಿ, ಎಲ್ಲರೊಂದಿಗೆ ಬೆರೆಯುವ ಗುಣದಿಂದ ಕುಟುಂಬ ಸದಸ್ಯರಲ್ಲಿ ತಾನು ಕೂಡ ಓರ್ವನಂತೆ ಎಂದು ಬದುಕುತ್ತದೆ. ಮನೆಮಂದಿಗೆಲ್ಲಾ ಆ ಮೂಕ ಪ್ರಾಣಿ ತೋರಿಸುವ ಪ್ರೀತಿ ಅಪಾರ. ಆದರೆ, ಮುದ್ದಿನ ನಾಯಿಯನ್ನ ಕಳೆದುಕೊಂಡರೆ ಆಗುವ ದುಃಖ ಅಷ್ಟಿಷ್ಟಲ್ಲ. ಇಂತಹ ಪ್ರೀತಿಯ ಶ್ವಾನ ಹೃದಯಾಘಾತದಿಂದ ಸಾವಿಗೀಡಾದ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.
ನ್ಯೂ ರಾಘವೇಂದ್ರ ಕಾಲೋನಿಯಲ್ಲಿರುವ ಮೋಹನ್ ಕುಲಕರ್ಣಿ ಎಂಬುವರ ಮನೆಯಲ್ಲಿ ಪ್ರೀತಿಯ ಶ್ವಾನ ಕಳೆದುಕೊಂಡ ಶೋಕ ಮಡುಗಟ್ಟಿದೆ. ಕುಲಕರ್ಣಿ ಕುಟುಂಬ ಕಳೆದ ಆರು ವರ್ಷದ ಹಿಂದೆ ನಾಯಿಮರಿ ತಂದು ಕ್ಯಾಂಡಿ ಅಂತ ಹೆಸರಿಟ್ಟು ಸಾಕಿದ್ದರು. ಹೆಸರಿಗೆ ತಕ್ಕಂತೆ ಕ್ಯಾಂಡಿ ನೋಡಲು ಮುದ್ದು ಮುದ್ದಾಗಿತ್ತು. ಆರು ವರ್ಷದಿಂದ ಕುಟುಂಬದೊಂದಿಗೆ ಬೆರೆತಿತ್ತು. ಬಂಧು ಬಳಗದವರು ಮನೆಗೆ ಬಂದ್ರೆ ಅವರನ್ನ ಗುರುತಿಸಿ ಪ್ರೀತಿ ತೋರಿಸುತಿತ್ತು. ಮನೆಯವರು ಹೊರಗೆ ಹೊರಟರೆ ಮಕ್ಕಳಂತೆ ಬೆನ್ನು ಹತ್ತುತ್ತಿತ್ತು. ಬೈಕ್ ಮೇಲೆ ಕುಳಿತು ಎಲ್ಲೆಂದರಲ್ಲಿ ಸುತ್ತಾಡುವ ಮೂಲಕ ಕುಟುಂಬದ ಅಚ್ಚುಮೆಚ್ಚಿನ ಸದಸ್ಯನಾಗಿತ್ತು.
ಇದನ್ನೂ ಓದಿ:ಫುಡ್ ಡೆಲಿವರಿಗೆ ಬಂದ ಜೊಮ್ಯಾಟೊ ಬಾಯ್.. ಯುವಕನ ಖಾಸಗಿ ಅಂಗಕ್ಕೆ ಕಚ್ಚಿತು ಶ್ವಾನ!