ಕಲಬುರಗಿ:ಜಿಲ್ಲೆಯ ಕರ್ನಾಟಕ 32ನೇ ಎನ್ಸಿಸಿ ಬೆಟಾಲಿಯನ್ ನಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಣೆ ಮಾಡಲಾಯಿತು.
ಕಲಬುರಗಿ: ಕಾರ್ಗಿಲ್ ವಿಜಯ್ ದಿವಸ ಆಚರಣೆ - NCC Battalion
ಕಲಬುರಗಿ ಜಿಲ್ಲೆಯ ಕರ್ನಾಟಕ 32ನೇ ಎನ್ಸಿಸಿ ಬೆಟಾಲಿಯನ್ ನಲ್ಲಿ ಕಾರ್ಗಿಲ್ ವಿಜಯ್ ದಿವಸವನ್ನು ಆಚರಣೆ ಮಾಡಲಾಯಿತು.
ಕಲಬುರಗಿ: ಕಾರ್ಗಿಲ್ ವಿಜಯ್ ದಿವಸ ಆಚರಣೆ
ಕರ್ನಲ್ ಎಸ್. ಕೆ. ತಿವಾರಿ ನೇತೃತ್ವದಲ್ಲಿ ವಿಜಯ ದಿವಸ್ ಆಚರಿಸಲಾಯಿತು. ಸಬ್ ಮೇಜರ್ ತ್ರಿಲೋಕ್ ಸಿಂಗ್ ಬೋರಾ, ಪಲ್ವಿಂದರ್ ಸಿಂಗ್, ಎಸ್.ಬಿ. ಸಿಂಗ್ ಅವರು ಕೂಡ ಗೌರವಾರ್ಪಣೆ ಮಾಡಿದರು. ಇತರೆ ಸಿಬ್ಬಂದಿಗಳೂ ಕೂಡ ಪುಷ್ಪಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಿದರು.
ಕಾರ್ಗಿಲ್ ಯುದ್ಧದಲ್ಲಿ 26 ಹಿರಿಯ ಅಧಿಕಾರಿಗಳೂ ಸೇರಿ 499 ಯೋಧರು ಹುತಾತ್ಮರಾಗಿದ್ದರು. 66 ಅಧಿಕಾರಿಗಳೂ ಸೇರಿ 1211 ಯೋಧರು ಗಾಯಗೊಂಡಿದ್ದರು. ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ ಕಾರ್ಗಿಲ್ ವಿಜಯೋತ್ಸವವನ್ನು, ಕಾರ್ಗಿಲ್ ಯುದ್ಧದ ರೋಚಕ ಕ್ಷಣಗಳನ್ನು ಸ್ಮರಿಸಲಾಯಿತು.
Last Updated : Jul 26, 2020, 11:04 PM IST