ಕರ್ನಾಟಕ

karnataka

ETV Bharat / state

ಸಾಹಿತ್ಯ ಸಮ್ಮೇಳನ ವಿಶೇಷ: ಪೊಲೀಸ್ ಅಧಿಕಾರಿಯೊಳಗೊಬ್ಬ ಕವಿ, ಖಾಕಿ ಧ್ವನಿಯಲ್ಲಿ ಕವನ ವಾಚನ - ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ

ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಕವನ ವಾಚಿಸಿ ಗಮನ ಸೆಳೆದಿದ್ದಾರೆ.

kalaburagi  kananda sahitya sammelana
ಪೊಲೀಸ್ ಅಧಿಕಾರಿಯೊಳಗೊಬ್ಬ ಕವಿ

By

Published : Feb 7, 2020, 6:54 PM IST

ಕಲಬುರಗಿ:85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳಷ್ಟೇ ಅಲ್ಲ, ಕರ್ತವ್ಯನಿರತ ಪೊಲೀಸ್ ಅಧಿಕಾರಿ ಕವನ ವಾಚನ ಮಾಡುವ ಮೂಲಕ ಕವಿಗೋಷ್ಠಿಯಲ್ಲಿ ಗಮನ ಸೆಳೆದರು.

ಗುಲ್ಬರ್ಗಾ ನಗರ ಕಮಿಷನರ್ ಕಚೇರಿಯಲ್ಲಿ ಸಿಪಿಐಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ವಸಂತ್ ಕುಮಾರ್ ‘ನನ್ನವ್ವ’ ಎಂಬ ಕವಿತೆಯನ್ನು ವಾಚಿಸಿದರು. ಮುಖ್ಯ ವೇದಿಕೆಯಲ್ಲಿ ತಾವು ಬರೆದ ಕವನ ಓದಿದ ಬಳ್ಳಾರಿ ಜಿಲ್ಲೆಯ ವಸಂತ ಕುಮಾರ್, ಮಗುವಿನ ಮೇಲಿರುವ ತಾಯಿಯ ವಾತ್ಸಲ್ಯವನ್ನ ತಮ್ಮ ಅಕ್ಷರಗಳಲ್ಲಿ ಬಣ್ಣಿಸಿದ್ರು. ಕರ್ತವ್ಯದ ಒತ್ತಡದ ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿ ಪಡೆದುಕೊಂಡು, ಪೊಲೀಸ್ ಸಮವಸ್ತ್ರದಲ್ಲಿಯೇ ಬಂದು ಕವನ ವಾಚನ ಮಾಡಿದ ವಸಂತ್ ಕುಮಾರ್, ನೆರೆದ ಜನಸ್ತೋಮದ ಆಕರ್ಷಿಸಿದರಲ್ಲದೆ ತಾಯಿ ಪ್ರೀತಿ ಕಟ್ಟಿಕೊಡುವ ಕವಿತೆ ಹೇಳುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಪೊಲೀಸ್ ಅಧಿಕಾರಿಯೊಳಗೊಬ್ಬ ಕವಿ

ಅಂದನಾದ್ರೂ ಕಪ್ಪಗಿದ್ದರೂ, ದಪ್ಪಗಿದ್ದರೂ ತನ್ನ ಕುರುಡು ಮಗನಿಗೆ ತಾಯಿ ತುಪ್ಪವನ್ನೇ ನೀಡುತ್ತಾಳೆ. ಅರ್ಧ ಚಂದಿರನನ್ನೂ ನೋಡದ ಮಗುವಿಗೆ ತಾಯಿ ಪೂರ್ಣಚಂದಿರನಾಗಿ ತಾಯಿ ಕಾಣುತ್ತಾಳೆ.. ಎಂಬುದನ್ನು ಕವನದಲ್ಲಿ ಹೇಳಿದ್ರು. ಮಗುವಿಗೆ ತಾಯಿಯೇ ಎಲ್ಲ ಎಂಬುದನ್ನು ಸರಳವಾಗಿ ತಿಳಿಹೇಳುವ ಪ್ರಯತ್ನ ಮಾಡಿದರು.

ಇವರ ಜೊತೆ 25ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಡಾ. ರಂಗರಾಜ ವನದುರ್ಗ ಆಶಯ ನುಡಿಯಲ್ಲಿ ಮನೆಮಂದಿಯೆಲ್ಲ ರಕ್ಷಣೆಯಾಗಿರುವ ಕೌದಿಯಂತೆ ನಾವಿದ್ದೇವೆ ಎಂದು ಹೇಳಿದರು. ಡಾ. ಬಸವರಾಜ್ ಸಬರದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ABOUT THE AUTHOR

...view details