ಕಲಬುರಗಿ:ಲಂಚ ಪಡೆದ ಆರೋಪದಲ್ಲಿ ಜೈಲು ಕಂಬಿ ಎಣಿಸುತ್ತಿರುವ ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಆಯುಕ್ತ, ಕೆಎಎಸ್ ಅಧಿಕಾರಿ ಶಂಕ್ರಣ್ಣ ವಣಿಕ್ಯಾಳ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಕಲಬುರಗಿ ಹೈಕೋರ್ಟ್ ಪೀಠ ತಿರಸ್ಕರಿಸಿದೆ. ಕೋವಿಡ್ ಬಿಲ್ ಮಂಜೂರು ಮಾಡಲು ವಣಿಕ್ಯಾಳ ತಮ್ಮ ಅಧೀನ ಸಿಬ್ಬಂದಿ ಚನ್ನಪ್ಪ ಮುಖಾಂತರ ವ್ಯಕ್ತಿಯೊಬ್ವರಿಗೆ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕ್ಕೆ ಇಟ್ಟಿದ್ದರು.
ವ್ಯಕ್ತಿಯಿಂದ ಚನ್ನಪ್ಪ ಲಂಚ ಪಡೆಯುವ ವೇಳೆ ರೆಡ್ಹ್ಯಾಂಡ್ ಆಗಿ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು. ವಿಚಾರಣೆ ವೇಳೆ ಚನ್ನಪ್ಪನು ಶಂಕ್ರಣ್ಣ ವಣಿಕ್ಯಾಳ ಅವರೇ ನನಗೆ ಲಂಚ ಪಡೆಯುವಂತೆ ಹೇಳಿದ್ದಾರೆ ಎಂದು ಹೇಳಿದ್ದರು. ಈ ವೇಳೆ ಎಸಿಬಿ ಪೊಲೀಸರು ಶಂಕ್ರಣ್ಣ ವಣಿಕ್ಯಾಳ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪ ಸಾಬೀತಾಗಿದೆ.