ಕರ್ನಾಟಕ

karnataka

ETV Bharat / state

ಇಳಿ ವಯಸ್ಸಿನಲ್ಲಿ ಈರುಳ್ಳಿ ಬೆಳೆದ ವೃದ್ಧೆ, ವರುಣನ ಅಬ್ಬರಕ್ಕೆ ಸಾಲಕ್ಕೆ ಸಿಲುಕಿ ಕಣ್ಣೀರು...

ಹತ್ತಿ, ಈರುಳ್ಳಿ ಹಾಗೂ ಬಾವಿ ಹೂಳು ತೆಗೆಸಲು ಬರೋಬ್ಬರಿ 4 ಲಕ್ಷ ಹಣ ಖರ್ಚು ಮಾಡಿ ಸಾಲದ ಸುಳಿಯಲ್ಲಿ ಸಿಲುಕಿ ಹಿರಿ ಜೀವ ನರಳಾಡುತ್ತಿದೆ‌. ಇಳಿವಯಸ್ಸಿನಲ್ಲಿ ಬದುಕಿನ ಭರವಸೆ ಕಳೆದುಕೊಂಡು ಅಜ್ಜಿ ಕಣ್ಣೀರು ಹಾಕುತ್ತ ನೆರವಿನ ನೀರಿಕ್ಷೆಯಲ್ಲಿದ್ದಾರೆ.

kalaburagi-heavy-rain-effect-onion-croop-loss-news
ಇಳಿ ವಯಸ್ಸಿನಲ್ಲಿ ಈರುಳ್ಳಿ ಬೆಳೆದ ವೃದ್ಧೆ, ವರುಣನ ಅಬ್ಬರಕ್ಕೆ ಸಾಲಕ್ಕೆ ಸಿಲುಕಿ ಕಣ್ಣೀರು...

By

Published : Oct 28, 2020, 10:17 PM IST

ಕಲಬುರಗಿ: ಭೀಮಾ ನದಿ ಪ್ರವಾಹ ಮತ್ತು ಅತಿವೃಷ್ಠಿ ಅನ್ನದಾತನ ಬದುಕನ್ನು ಕಸಿದುಕೊಂಡಿದೆ. ಕೃಷಿಯಿಂದಲೇ ಜೀವನ ಸಾಗಿಸುತ್ತಿದ್ದ 70 ವರ್ಷದ ಹಿರಿಯ ಜೀವ ಇದೀಗ ಬೆಳೆ ಕಳೆದುಕೊಂಡು ಕಂಗಾಲಾಗಿದ್ದು, ಬದುಕಿನ ಭರವಸೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಇಳಿ ವಯಸ್ಸಿನಲ್ಲಿ ಈರುಳ್ಳಿ ಬೆಳೆದ ವೃದ್ಧೆ, ವರುಣನ ಅಬ್ಬರಕ್ಕೆ ಸಾಲಕ್ಕೆ ಸಿಲುಕಿ ಕಣ್ಣೀರು...

ಕಲಬುರಗಿ ಜಿಲ್ಲೆ ಅತಿವೃಷ್ಠಿ ಜೊತೆಗೆ ಭೀಮಾ ನದಿ ಮಹಾ ಪ್ರವಾಹಕ್ಕೆ ಜನರ ಬದುಕು ಕೊಚ್ಚಿ ಹೋಗಿದೆ‌. ಮನೆ ಮಠ ಕಳೆದುಕೊಂಡು ನದಿ ಪಾತ್ರದ ಜನರು ಬೀದಿಗೆ ಬಿದ್ದಿದ್ದಾರೆ. ಕೃಷಿಯಿಂದಲೇ ಜೀವನ ಸಾಗಿಸುತ್ತಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಸರಗುಂಡಗಿ ಗ್ರಾಮದ 70 ವರ್ಷದ ಹಿರಿಯಜ್ಜಿ ಗುಂಡಮ್ಮಳ ಬದುಕು ಕೂಡ ವರುಣನ ವಕ್ರ ದೃಷ್ಟಿಗೆ ನಲುಗಿ ಹೋಗಿದೆ.

ಇರುವ ಮೂರು ಎಕರೆಯಲ್ಲಿ ಈರುಳ್ಳಿ, ಹತ್ತಿ ಬೆಳೆದಿದ್ದ ಅಜ್ಜಿ ಇದೀಗ ಕಣ್ಣೀರು ಹಾಕುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಮೂರು ಬಾರಿ ನಾಟಿ ಮಾಡಿರುವ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಹತ್ತಿ ಬೆಳೆಯಲ್ಲೂ ಮೊಣಕಾಲುದ್ದ ನೀರು ಶೇಖರಣೆಯಾಗಿ ಹಾಳಾಗಿದೆ‌. ಹತ್ತಿ, ಈರುಳ್ಳಿ ಹಾಗೂ ಬಾವಿ ಹೂಳು ತೆಗೆಸಲು ಬರೋಬ್ಬರಿ 4 ಲಕ್ಷ ಹಣ ಖರ್ಚು ಮಾಡಿ ಸಾಲದ ಸುಳಿಯಲ್ಲಿ ಸಿಲುಕಿ ಹಿರಿ ಜೀವ ನರಳಾಡುತ್ತಿದೆ‌. ಇಳಿವಯಸ್ಸಿನಲ್ಲಿ ಬದುಕಿನ ಭರವಸೆ ಕಳೆದುಕೊಂಡು ಅಜ್ಜಿ ಕಣ್ಣೀರು ಹಾಕುತ್ತ ನೆರವಿನ ನೀರಿಕ್ಷೆಯಲ್ಲಿದ್ದಾರೆ.

ಈ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಬದುಕಿನ ಭರವಸೆ ಕಳೆದುಕೊಂಡು ಪರಿಹಾರದ ನಿರೀಕ್ಷೆಯಲ್ಲಿರುವ ರೈತರ ನೆರವಿಗೆ ಸರ್ಕಾರ ಶೀಘ್ರ ಸ್ಪಂದಿಸಬೇಕಿದೆ.

ABOUT THE AUTHOR

...view details