ಕಲಬುರಗಿ: ರೈತರು ತಮ್ಮ ಜಮೀನು ಮಾರಾಟ, ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಜಮೀನಿನ ಪಹಣಿ ಹೋಲ್ಡಿಂಗ್ ಸರಿಯಾಗಿರಬೇಕು. ಇಲ್ಲದಿದ್ದರೆ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಹಲಕರ್ಟಿ ಗ್ರಾಮದ ರೈತರ ಜಮೀನಿಗೆ ಸಂಬಂಧಪಟ್ಟಂತೆ ಪಹಣಿಯಲ್ಲಿ ಸಾಕಷ್ಟು ದೋಷಗಳಿವೆ.
ಒಂದೆ ಸರ್ವೇ ನಂಬರ್, ಒಂದೆ ಹಿಸ್ಸಾ ಜಮೀನಿನ ಪಹಣಿಯಲ್ಲಿ ಇಬ್ಬರು ಮೂವರ ಹೆಸರುಗಳು ಬರುತ್ತಿದೆ. ಕಟ್ಟಾ ಜಮೀನಿದ್ರೂ ಸರ್ಕಾರಿ ಜಮೀನೆಂದು ಪಹಣಿಗಳಲ್ಲಿ ಬರುತ್ತಿದೆ. ಇಂತಹ ಸಮಸ್ಯೆಯಿಂದಾಗಿ ರೈತರು ಸರ್ಕಾರಿ ಸೌಲಭ್ಯ, ಪಹಣಿಯಿಂದ ಪಡೆಯಬಹುದಾದ ಸಾಲ ಸೌಲಭ್ಯದಿಂದಲೂ ವಂಚಿತರಾಗುತ್ತಿದ್ದಾರೆ. ಇದರಿಂದ ಬೇಸತ್ತ ರೈತರು ಪಹಣಿಯಲ್ಲಿರುವ ದೋಷ ಸರಿಮಾಡುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಹಲಕರ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 650ಕ್ಕೂ ಹೆಚ್ಚು ಸರ್ವೆ ನಂಬರ್ಗಳಿದ್ದು, ಬಹುತೇಕ ಸರ್ವೆ ನಂಬರ್ ಪಹಣಿಗಳಲ್ಲಿ ದೋಷವಿದೆ. ಕಳೆದ 8-10 ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಸ್ಥರು ಪಹಣಿಯಲ್ಲಿನ ದೋಷ, ತಪ್ಪುಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕಳೆದ 2016 ನೇ ಸಾಲಿನಲ್ಲಿ 60 ಎತ್ತಿನ ಬಂಡಿಗಳಲ್ಲಿ ಹಲಕರ್ಟಿ ರೈತರು, ಚಿತ್ತಾಪುರ ತಹಶೀಲ್ದಾರ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೂ ಫಲಕಾರಿಯಾಗಿಲ್ಲ. ಮುಂಚಿನಿಂದಲೂ ದೋಷ ಇರುವುದು ಗಮನಕ್ಕೆ ಬಂದಿದೆ. ಮುಂದಿನ ಒಂದು ತಿಂಗಳಲ್ಲಿ ಸರಿಪಡಿಸುವುದಾಗಿ ಡಿಸಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಂಡ್ಯ : ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ