ಕಲಬುರಗಿ:ಹೆಚ್ಚಿನ ಲಾಭಕ್ಕಾಗಿ ಕೆಲವು ರೈತರು ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ ಕೃಷಿಯನ್ನು ಮಾಡ್ತಿದ್ದಾರೆ. ಆದರೆ ಇಲ್ಲೊಬ್ಬ ರೈತರಿದ್ದಾರೆ ಇವರು ಬೇರೆ ರೈತರಿಗೆ ಹೋಲಿಕೆ ಮಾಡಿದ್ರೆ ತುಂಬಾನೇ ಡಿಫರೆಂಟ್, ಒಂದೂವರೆ ಎಕರೆ ಬರಡು ಭೂಮಿಯಂತಿದ್ದ ಭೂಮಿಯಲ್ಲಿ ಬಂಗಾರದಂತ ಗುಲಾಬಿ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಗುಲಾಬಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಗುಲಾಬಿ ಹೂವಿಗೆ ಮನಸೋಲದವರೇ ಇಲ್ಲ. ಇದೇ ಗುಲಾಬಿ ಹೂವುಗಳಿಂದ ಇಲ್ಲೋರ್ವ ರೈತ ಲಕ್ಷ ಲಕ್ಷ ಆದಾಯ ಪಡೆಯುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಹೌದು, ಹೀಗೆ ಹೊಲದಲ್ಲಿ ಗುಲಾಬಿ ಹೂ ಬಿಡಿಸುತ್ತಿರುವ ಇವರ ಹೆಸರು ಹನುಮಂತ ರೆಡ್ಡಿ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ದಿನ್ಸಿ (ಕೆ) ಗ್ರಾಮದ ನಿವಾಸಿಯಾದ ಇವರು, ಒಂದೂವರೆ ಎಕರೆ ಪ್ರದೇಶದಲ್ಲಿ ಬಿಜಲಿ, ಬುಲೆಟ್ ಸೇರಿ ವಿವಿಧ ತಳಿಯ ಗುಲಾಬಿ ಹೂವುಗಳನ್ನು ಬೆಳೆದಿದ್ದಾರೆ. ಸದ್ಯ ಹೆಚ್ಚಿನದಾಗಿ ಹೂವುಗಳು ಅರಳಿ ನಿಂತಿದ್ದು, ಕಲಬುರಗಿ ಸೇರಿ ಇತರೆ ಮಾರ್ಕೆಟ್ಗಳಿಗೆ 100ರಿಂದ 120 ರೂಪಾಯಿಗೆ ಕೆ.ಜಿಯಂತೆ ಮಾರಾಟ ಮಾಡಿ, ನಿತ್ಯ ಸರಾಸರಿ 2 ರಿಂದ ಎರಡೂವರೆ ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.