ಕಲಬುರಗಿ :ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತ (ಜನತಾ ಬಜಾರ್) ಕ್ಕೆ ಇಂದು ಚುನಾವಣೆ ನಡೆದಿದ್ದು, ಬೆಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಕಲಬುರಗಿ ಜನತಾ ಬಜಾರ್ ಬಿಜೆಪಿ ತೆಕ್ಕೆಗೆ - ಕಲಬುರಗಿ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಗೆ ಜಯ
ಕಲಬುರಗಿ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತಕ್ಕೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ದತ್ತಾತ್ರೇಯ ಫಡ್ನಿಸ್ ಮತ್ತು ಉಪಾಧ್ಯಕ್ಷರಾಗಿ ವಂದನಾ ವಿ. ಮಂಗಳೂರ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಒಂದು ಮತದ ಅಂತರದಿಂದ ಬೆಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 11 ಮತ ಪಡೆದು ಗೆದ್ದು ಬೀಗಿದ್ದಾರೆ.
ಜನತಾ ಬಜಾರ್ ಬಿಜೆಪಿ ತೆಕ್ಕೆಗೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಕೆಲ ದಿನಗಳ ಹಿಂದೆಯಷ್ಟೇ ಡಿಸಿಸಿ ಬ್ಯಾಂಕ್ನಲ್ಲೂ ಕೂಡ ಕಮಲ ಅರಳಿದ್ದು, ಕಾಂಗ್ರೆಸ್ಗೆ ಬಹುಮತ ಇದ್ದರೂ, ಇಬ್ಬರು ಸದಸ್ಯರನ್ನು ಅನರ್ಹಗೊಳಿಸಿದ ಕಾರಣ, ಬಿಜೆಪಿ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿದಿದೆ.