ಕಲಬುರಗಿ:ಕೊರೊನಾ ನಿಯಂತ್ರಿಸುವಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಹೆಚ್ಒ) ಡಾ. ಎಂ.ಎ. ಜಬ್ಬಾರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಶರತ್ ಆದೇಶ ಹೊರಡಿಸಿದ್ದಾರೆ.
ಕರ್ತವ್ಯಲೋಪ ಆರೋಪ: ಕಲಬುರಗಿ ಡಿಹೆಚ್ಒ ದಿಢೀರ್ ವರ್ಗಾವಣೆ - Kalaburagi DHO Transfer
ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು (ಡಿಹೆಚ್ಒ) ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಡಾ.ಎಂ.ಎ.ಜಬ್ಬಾರ್
ಜಿಲ್ಲಾಸ್ಪತ್ರೆಯಲ್ಲಿ ಸ್ಥಳೀಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಜಶೇಖರ ಮಾಲಿ ಅವರನ್ನು ಪ್ರಭಾರಿ ಡಿಹೆಚ್ಓ ಆಗಿ ಸರ್ಕಾರ ನೇಮಿಸಿದೆ. ಡಾ. ರಾಜಶೇಖರ ಅವರ ಜಾಗಕ್ಕೆ ಜಬ್ಬಾರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಕೊರೊನಾ ತಡೆಯುವಲ್ಲಿ ವಿಫಲವಾಗಿದ್ದಾರೆಂದು ಡಿಹೆಚ್ಒ ಆಗಿದ್ದ ಜಬ್ಬಾರ್ ಅವರ ಸ್ಥಾನಕ್ಕೆ ಬೇರೆಯವರನ್ನು ನಿಯುಕ್ತಗೊಳಿಸಿ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಆಗ ಡಿಸಿ ಶರತ್ ಅವರು ಜಬ್ಬಾರ್ ಅವರ ಬೆಂಬಲಕ್ಕೆ ನಿಂತು ಆ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮಾಡಿದ್ದರು. ಆದರೀಗ ಬೆಂಬಲಕ್ಕೆ ನಿಂತವರೇ ವರ್ಗಾವಣೆ ಮಾಡಿದ್ದಾರೆ.