ಕಲಬುರಗಿ :ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಆರ್ಭಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಧಿಕಾರಿ ವಿಜಯ ವಿ ಜೋತ್ಸ್ನಾ ಮತ್ತು ನಗರ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ಸ್ವತಃ ಫೀಲ್ಡ್ಗಿಳಿದು ಜಾಗೃತಿ ಮೂಡಿಸಿದ್ದಾರೆ.
ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಾಕಷ್ಟು ಬಾರಿ ಹೇಳಿದ್ರೂ ಜನ ಮಾತ್ರ ನಿರ್ಲಕ್ಷ್ಯವಹಿಸುತ್ತಿರುವುದನ್ನ ಮನಗಂಡ ಜಿಲ್ಲಾಡಳಿತ ಇವತ್ತು ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.
ನಗರದ ಜಗತ್ ವೃತ್ತ ಮತ್ತು ಸೂಪರ್ ಮಾರ್ಕೆಟ್ನಲ್ಲಿ ರೌಂಡ್ಸ್ ಹೊಡೆದ ಅಧಿಕಾರಿ ವರ್ಗ, ಬೈಕ್ ಸವಾರರಿಗೆ, ಪಾದಚಾರಿಗಳಿಗೆ, ನಗರ ಸಾರಿಗೆ ಬಸ್ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಕೋವಿಡ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಮಾಸ್ಕ್ ಹಾಕದವರಿಗೆ ಎಚ್ಚರಿಕೆಯ ಸಂದೇಶವಾಗಿ 250 ರೂ. ದಂಡ ವಿಧಿಸಿದ್ದಾರೆ.