ಕಲಬುರಗಿ :ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ವೈ ಎಸ್ ರವಿಕುಮಾರ ರೌಡಿ ಪರೇಡ್ ನಡೆಸಿ, ಚುನಾವಣೆ ಸಂದರ್ಭದಲ್ಲಿ ಕ್ರೈಂ ಚಟುವಟಿಕೆಗಳನ್ನು ನಡೆಸಿದ್ರೆ ಕಠಿಣ ಶಿಕ್ಷೆ ನೀಡುವ ಎಚ್ಚರಿಕೆ ನೀಡಿದರು.
ಪಾಲಿಕೆ ಚುನಾವಣೆ.. ಬಾಲ ಬಿಚ್ಚದಂತೆ ರೌಡಿಗಳಿಗೆ ಕಲಬುರಗಿ ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ..
ಪಾಲಿಕೆ ಚುನಾವಣೆಯಲ್ಲಿ ಜನರು ಮುಕ್ತವಾಗಿ ಮತದಾನ ಮಾಡಬೇಕು. ಹೆದರಿಸುವುದು ಬೆದರಿಸುವುದು ಮಾಡಿದ್ರೆ ಬಾಲ್ ಕಟ್ ಮಾಡ್ಬೀತಿನಿ ಹುಷಾರ್ ಅಂತಾ ವಾರ್ನಿಂಗ್ ಕೂಡ ನೀಡಿದರು. ಪಾಲಿಕೆ ಚುನಾವಣೆ ಮುಗಿಯುವವರೆಗೆ ಪ್ರತಿನಿತ್ಯ ಪೊಲೀಸ್ ಠಾಣೆಗೆ ಬಂದು ಸಹಿ ಹಾಕುವಂತೆ ಹೇಳಿ, ರೌಡಿಗಳಿಂದ ಬಾಂಡ್ ಬರೆಸಿಕೊಂಡರು..
ನಗರದ ಪೊಲೀಸ್ ಕಮಿಷನರ್ ಕಚೇರಿಯ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಕಲಬುರಗಿ ಸಿಟಿ ವ್ಯಾಪ್ತಿಯ 'ಎ' ಡಿವಿಜನ್ನ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯ 100ಕ್ಕೂ ಅಧಿಕ ರೌಡಿಗಳಿಗೆ ಪರೇಡ್‌ನಲ್ಲಿ ಪೊಲೀಸ್ ಆಯುಕ್ತರು ಬಿಸಿ ಮುಟ್ಟಿಸಿದರು. ಅಲ್ಲದೆ, ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚದೆ, ಸೈಲೆಂಟ್ ಆಗಿದ್ರೆ ಒಳ್ಳೆಯದು. ಸಮಾಜಘಾತುಕ ಕೆಲಸದಲ್ಲಿ ಭಾಗಿಯಾದ್ರೆ ಅಪರಾದ ಕೃತ್ಯಗಳಲ್ಲಿ ಪಾಲ್ಗೊಂಡರೆ ಮುಲಾಜಿಲ್ಲದೆ ಗಡಿಪಾರು ಮಾಡುವುದಾಗಿ ಎಚ್ಚರಿಸಿದರು.
ಪಾಲಿಕೆ ಚುನಾವಣೆಯಲ್ಲಿ ಜನರು ಮುಕ್ತವಾಗಿ ಮತದಾನ ಮಾಡಬೇಕು. ಹೆದರಿಸುವುದು ಬೆದರಿಸುವುದು ಮಾಡಿದ್ರೆ ಬಾಲ್ ಕಟ್ ಮಾಡ್ಬೀತಿನಿ ಹುಷಾರ್ ಅಂತಾ ವಾರ್ನಿಂಗ್ ಕೂಡ ನೀಡಿದರು. ಪಾಲಿಕೆ ಚುನಾವಣೆ ಮುಗಿಯುವವರೆಗೆ ಪ್ರತಿನಿತ್ಯ ಪೊಲೀಸ್ ಠಾಣೆಗೆ ಬಂದು ಸಹಿ ಹಾಕುವಂತೆ ಹೇಳಿ, ರೌಡಿಗಳಿಂದ ಬಾಂಡ್ ಬರೆಸಿಕೊಂಡರು.