ಕರ್ನಾಟಕ

karnataka

ETV Bharat / state

ಕಲಬುರಗಿ ಮಗು ಸಾವು ಪ್ರಕರಣ:24 ಗಂಟೆಯೊಳಗೇ ಪಿಎಸ್​ಐ ತಲೆದಂಡ! - ಜೇವರ್ಗಿ ಪಿಎಸ್​ಐ ಅಮಾನತು,

Kalaburagi child death case, Kalaburagi child death case, PS I suspended for Kalaburagi child death case, jevargi PS I suspended,  jevargi PS I suspended news, ಕಲಬುರಗಿ ಮಗು ಸಾವು ಪ್ರಕರಣ, ಕಲಬುರಗಿ ಮಗು ಸಾವು ಪ್ರಕರಣ ಸುದ್ದಿ, ಕಲಬುರಗಿ ಮಗು ಸಾವು ಪ್ರಕರಣ ಸಂಬಂಧ ಪಿಎಸ್​ಐ ಅಮಾನತು, ಜೇವರ್ಗಿ ಪಿಎಸ್​ಐ ಅಮಾನತು, ಜೇವರ್ಗಿ ಪಿಎಸ್​ಐ ಅಮಾನತು ಸುದ್ದಿ,
ಪಿಎಸ್​ಐ ಮಂಜುನಾಥ್ ಹೂಗಾರ್

By

Published : Jan 4, 2021, 11:49 PM IST

Updated : Jan 5, 2021, 1:08 AM IST

23:33 January 04

24 ಗಂಟೆಯೊಳಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಸಿ ಜೋತ್ನ್ಯಾ ಭರವಸೆ ನೀಡಿದ ಬೆನ್ನಲ್ಲೇ ಜೇವರ್ಗಿ ಪಿಎಸ್​ಐ ತಲೆದಂಡವಾಗಿದೆ.

ಪಿಎಸ್​ಐ ಮಂಜುನಾಥ್ ಹೂಗಾರ್

ಕಲಬುರಗಿ: ಜೈಲಿನಲ್ಲಿ ಮೂರು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ಠಾಣೆಯ ಸಬ್ ಇನ್ಸ್​ಪೇಕ್ಟರ್​ನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. 

ಜೈಲಿನಲ್ಲಿ ಮಗು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್​ಐ ಮಂಜುನಾಥ್ ಹೂಗಾರ್​ರ​ನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್ ಜಾರ್ಜ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಗ್ರಾಪಂ. ಚುನಾವಣೆ ನಂತರ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಗೆದ್ದ ಅಭ್ಯರ್ಥಿ ಹಾಗೂ ಸೋತ ಅಭ್ಯರ್ಥಿ ಮಧ್ಯೆ ಗಲಾಟೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಎಂಬಾತನನ್ನು ಸೇರಿ ಆತನ ಕುಟುಂಬದ ಏಳು ಜನರನ್ನು ಪೊಲೀಸರು ಬಂಧಿಸಿ ಮಕ್ಕಳ ಸಮೇತ ಜೈಲಿಗೆ ಕಳಿಸಿದ್ದರು.‌ ಈ ವೇಳೆ ಮೂರು ವರ್ಷದ ಮಗು ಭಾರತಿ ಸಾವನ್ನಪ್ಪಿತ್ತು.

ಇದನ್ನೂ ಓದಿ:ಕೇಂದ್ರ ಕಾರಾಗೃಹದಲ್ಲಿ ಬಾಲಕಿ ಸಾವು ಪ್ರಕರಣ: ಪ್ರತಿಭಟನೆ ಹಿಂಪಡೆದ ಹೋರಾಟಗಾರರು

ಮಗು ಸಾವಿಗೆ ಸಬ್ ಇನ್ಸಪೇಕ್ಟರ್ ಮಂಜುನಾಥ್​ ಹೂಗಾರ ಕಾರಣ. ವಿಚಾರಣೆ ನೇಪದಲ್ಲಿ ವಿನಾಕಾರಣ ಕುಟುಂಬದ ಸದಸ್ಯರನ್ನು ಠಾಣೆಗೆ ತಂದು ಕಿರುಕುಳ ನೀಡಿ ಜೈಲಿಗೆ ಕಳುಸಿದ್ದಾರೆ. ಇದರಿಂದ ಆಘಾತಗೊಂಡ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿ ಮಗುವಿನ ಮೃತ ದೇಹದ ಸಮೇತ ಭಾನುವಾರ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೆ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.  

ಜೇವರ್ಗಿ ಶಾಸಕ ಅಜಯಸಿಂಗ್ ಸೇರಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸಬ್ ಇನ್ಸ್​ಪೇಕ್ಟರ್ ಮಂಜುನಾಥ್​ ಹೂಗಾರ್​ರ​ನ್ನು ಸೇವೆಯಿಂದ ಅಮಾನತುಗೊಳಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಡಿಸಿ ವಿವಿ ಜೋತ್ನ್ಯಾ ತನಿಖೆ ನಡೆಸಿ 24 ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆ ಭಾನುವಾರ ರಾತ್ರಿ 11:45 ಕ್ಕೆ ಹೋರಾಟ ಕೈಬಿಡಲಾಗಿತ್ತು.

ಇದನ್ನೂ ಓದಿ:ಜೈಲಿನಲ್ಲಿ ಮೂರು ವರ್ಷದ ಮಗು ಸಾವು : ಲಾಕ್‌ಅಪ್​ ಡೆತ್​ ಆರೋಪ

ಇದೀಗ 24 ಗಂಟೆ ಒಳಗಾಗಿ ಪಿಎಸ್ಐ ಮಂಜುನಾಥ್ ಹೂಗಾರ ತಲೆದಂಡವಾಗಿದೆ. ಹೂಗಾರ್​ರನ್ನು ಅಮಾನತುಗೊಳಿಸಿ ಎಸ್​ಪಿ ಆದೇಶ ಹೊರಡಿಸಿದ್ದಾರೆ.

Last Updated : Jan 5, 2021, 1:08 AM IST

ABOUT THE AUTHOR

...view details