ಕರ್ನಾಟಕ

karnataka

ETV Bharat / state

ಕಲಬುರಗಿ : ಅದ್ಧೂರಿಯಾಗಿ ಜರುಗುತ್ತಿರುವ ಮಣ್ಣೂರ ಶ್ರೀ ಯಲ್ಲಮ್ಮ ದೇವಿ ಜಾತ್ರೆ - Mannur Yellamma Devi Fair at Kalaburagi

ಕಲಬುರಗಿಯಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಶನಿವಾರ ಆರಂಭಗೊಂಡ ಜಾತ್ರೆ ಈ ತಿಂಗಳ 20ರವರೆಗೆ ನಡೆಯುತ್ತದೆ. ಮೇ 17ರಂದು ಜಂಗಿ ಕುಸ್ತಿ ಆಯೋಜನೆ ಮಾಡಲಾಗಿದೆ. ಜಾತ್ರೆ ಅಂಗವಾಗಿ ಏಳು ದಿನ ಜಾನುವಾರ ಜಾತ್ರೆ ನಡೆಯುತ್ತಿದೆ..

Mannur Yellamma Devi Fair at Kalaburagi
ಮಣ್ಣೂರ ಯಲ್ಲಮ್ಮ ದೇವಿ ಜಾತ್ರೆ

By

Published : May 16, 2022, 6:21 PM IST

Updated : May 16, 2022, 7:16 PM IST

ಕಲಬುರಗಿ :ಭೀಮಾನದಿಯ ಮಧ್ಯದಲ್ಲಿ ನೆಲೆಸಿರುವ ಕಲ್ಯಾಣ ಕರ್ನಾಟಕ ಜನರ ಆರಾಧ್ಯ ದೈವ ಮಣ್ಣೂರ ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಏಳು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದೇವಿ ಬಾಸಿಂಗ್ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಶನಿವಾರ ಆರಂಭಗೊಂಡ ಜಾತ್ರೆ ಈ ತಿಂಗಳ 20ರವರೆಗೆ ನಡೆಯುತ್ತದೆ. ಏಳು ದಿನವೂ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಕೋವಿಡ್​ ಹಿನ್ನೆಲೆ ಎರಡು ವರ್ಷಗಳ ನಂತರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ.

ಮಣ್ಣೂರ ಶ್ರೀ ಯಲ್ಲಮ್ಮ ದೇವಿ ಜಾತ್ರೆ

ಅಪಾರ ಭಕ್ತರ ಮಧ್ಯೆ ಬಾಸಿಂಗ್ ಮೆರವಣಿಗೆ :ಭಾನುವಾರ ಯಲ್ಲಮ್ಮ ದೇವಿಯ ಬಾಸಿಂಗ ಮೆರವಣಿಗೆ ಜರುಗಿತು. ರಾತ್ರಿ 9 ಗಂಟೆಗೆ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ನಡೆದ ಬಾಸಿಂಗ್ ಮೆರವಣಿಗೆಯಲ್ಲಿ ಹಲವೆಡೆಯಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು. ತಡರಾತ್ರಿ ಬಾಸಿಂಗ ದೇವಸ್ಥಾನಕ್ಕೆ ತಲುಪಿತು. ಇಂದು ಸೋಮವಾರ ಪಡಸಾವಳಗಿ ಉದಗಿರ ಮಠದ ಷ.ಬ್ರ. ಡಾII ಶಂಭುಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ರುದ್ರಾಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಯಂಕಾಲ ಭೀಮಾ ನದಿ ಮಧ್ಯದ ಯಲ್ಲಮ್ಮ ದೇವಿ ಮಂದಿರದವರೆಗೆ‌ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ಇದನ್ನೂ ಓದಿ:ಮಾಂಸದೂಟ ಪ್ರಕರಣ: ಮುಜರಾಯಿ, ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿವೆಯಾ..?- ಮುತಾಲಿಕ ಪ್ರಶ್ನೆ

ಪಲ್ಲಕ್ಕಿ ಉತ್ಸವದಲ್ಲಿ ನವಿಲು ಕುಣಿತ, ಕುದುರೆ ಕುಣಿತ, ಕರಡಿ ಕುಣಿತ, ಸಾಂಪ್ರದಾಯಿಕ ವಾದ್ಯ ಮೇಳ ಇರಲಿದೆ. ರಾತ್ರಿ ಮದ್ದು ಸುಡುವ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಲಿದೆ‌. ಮೇ 17ರಂದು ಜಂಗಿ ಕುಸ್ತಿ ಆಯೋಜನೆ ಮಾಡಲಾಗಿದೆ. ಜಾತ್ರೆ ಅಂಗವಾಗಿ ಏಳು ದಿನ ಜಾನುವಾರ ಜಾತ್ರೆ ನಡೆಯುತ್ತಿದೆ. ಉತ್ತಮ ಜಾನುವಾರುಗಳಿಗೆ ಯಲ್ಲಮ್ಮ ದೇವಿ ಟ್ರಸ್ಟ್ ಕಮಿಟಿ ಬಹುಮಾನ ವಿತರಿಸಲಿದೆ. ಜಾತ್ರೆಯ ಅಂಗವಾಗಿ ನಾಟಕ ಹಾಗೂ ದೇವಿ ಮಹಾತ್ಮೆ ಬಯಲಾಟ ನಡೆಯಲಿವೆ.

Last Updated : May 16, 2022, 7:16 PM IST

ABOUT THE AUTHOR

...view details