ಕಲಬುರಗಿ:ಜಮೀನು ಹಂಚಿಕೆ ವಿವಾದ ತಾರಕಕ್ಕೆ ತಿರುಗಿ ದಾಯಾದಿಗಳ ನಡುವೆ ನಡೆದ ಕಲಹ ಮೂವರ ಕೊಲೆಯಲ್ಲಿ ಅಂತ್ಯವಾದ ಅಮಾನವಿಯ ಘಟನೆ ಸೇಡಂ ತಾಲೂಕಿನ ಮೇದಕ ಗ್ರಾಮದಲ್ಲಿ ನಡೆದಿದೆ.
ಆಸ್ತಿಗಾಗಿ ತಂದೆ ಮಕ್ಕಳ ಹತ್ಯೆ: ಆಗಂತುಕರ ಬಂಧನಕ್ಕೆ ಪೊಲೀಸರ ಬಲೆ - undefined
ಕಲಬುರಗಿಯ ಮೇದಕ ಗ್ರಾಮದ ಹೊಲವೊಂದರಲ್ಲಿ ಜಮೀನು ಹಂಚಿಕೆ ವಿಚಾರವಾಗಿ ಮೂವರನ್ನು ಬರ್ಬರವಾಗಿ ಕೊಡಲಿಯಿಂದ ಕೊಚ್ಚಿ ಕೊಲೆಮಾಡಲಾಗಿದೆ.
![ಆಸ್ತಿಗಾಗಿ ತಂದೆ ಮಕ್ಕಳ ಹತ್ಯೆ: ಆಗಂತುಕರ ಬಂಧನಕ್ಕೆ ಪೊಲೀಸರ ಬಲೆ](https://etvbharatimages.akamaized.net/etvbharat/prod-images/768-512-3544811-thumbnail-3x2-klb.jpg)
ಕೊಲೆಯಾದವರನ್ನು ಮಲ್ಕಪ್ಪ ಚಿನ್ನಯ್ಯ (60) ಹಾಗೂ ಈತನ ಮಕ್ಕಳು ಶಂಕ್ರಪ್ಪ ಮಲ್ಕಪ್ಪ (26) ಮತ್ತು ಚಿನ್ನಪ್ಪ ಮಲ್ಕಪ್ಪ (27) ಎಂದು ಗುರುತಿಸಲಾಗಿದೆ. ತಂದೆ ಮತ್ತು ಮಗ ಸ್ಥಳದಲ್ಲೇ ಸಾವನಪ್ಪಿದ್ದು, ತೀವ್ರವಾಗಿ ಗಾಯಗೊಂಡ ಮತ್ತೊರ್ವ ಮಗ ಸೇಡಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಕೊಲೆಗೆ ನಿಖರ ಮಾಹಿತಿ ದೊರೆತಿಲ್ಲವಾದರೂ ಜಮೀನು ವಿವಾದವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಸಿಪಿಐ (ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್) ತಮ್ಮಾರಾಯ ಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.