ಕರ್ನಾಟಕ

karnataka

ETV Bharat / state

ಟಂಟಂ - ಬೈಕ್ ಡಿಕ್ಕಿ: ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪುತ್ರ ಸಾವು - ಹಾಗರಗುಂಡಗಿ ಗ್ರಾಮ

ಟಂಟಂ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಹಾಗರಗುಂಡಗಿ ಗ್ರಾಮ ಪಂಚಾಯಿತಿಯು ಮಾಜಿ ಉಪಾಧ್ಯಕ್ಷೆ ಪುತ್ರ ಮೃತಪಟ್ಟಿದ್ದಾನೆ.

Santosh
ಸಂತೋಷ್​

By

Published : Oct 12, 2020, 10:48 PM IST

ಕಲಬುರಗಿ:ತರಕಾರಿ ಸಾಗಿಸುತ್ತಿದ್ದ ಟಂಟಂ ವಾಹನ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪುತ್ರ ಮೃತಪಟ್ಟಿರುವ ಘಟನೆ ಫರತಾಬಾದ ಬಳಿ ನಡೆದಿದೆ.

ಹಾಗರಗುಂಡಗಿ ಗ್ರಾಮದ ಸಂತೋಷ ಮೇಲಿನಕೇರಿ ಮೃತಪಟ್ಟ ಬೈಕ್ ಸವಾರ. ಕಲಬುರಗಿ ಕಡೆಯಿಂದ ಬೈಕ್ ಮೇಲೆ ಹಾಗರಗುಂಡಗಿ ಗ್ರಾಮಕ್ಕೆ ಬರುವಾಗ ತರಕಾರಿ ಹೊತ್ತು ಸಾಗುತ್ತಿದ್ದ ಟಂಟಂ ಮಧ್ಯೆ ಡಿಕ್ಕಿ ಸಂಭವಿಸಿದೆ.

ಫರತಾಬಾದ ಹಾಗೂ ಸಿರನೂರ ಮದ್ಯೆ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಸಂತೋಷ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ABOUT THE AUTHOR

...view details