ಕರ್ನಾಟಕ

karnataka

ETV Bharat / state

ಅರ್ಧ ಕಟ್ಟಾಗಿ ಬಿದ್ದ ಕೂಸು.. ಮಗು ನೋಡುತ್ತಾ ಜೀವನ್ಮರಣದ ಜೊತೆ ಹೋರಾಡುತ್ತಿದ್ದ ತಾಯಿ... ಹೇ ವಿಧಿಯೇ ನೀನೆಷ್ಟು ಕ್ರೂರಿ - kalaburgi mother son accident news

ಇನ್ನೊಂದು ಹೆಜ್ಚೆ ದಾಟಿದ್ರೆ ಮಗುವಿನ ಮುದ್ದಾದ ನಗು ನೋಡುತ್ತಾ ನಲಿಯ ಬೇಕಿದ್ದ ತಾಯಿ ಒಂದು ಕಡೆ, ಇನ್ನೊಂದು ಕಡೆ ಅರ್ಧ ತುಂಡಾಗಿ ಬಿದ್ದಿದ್ದ ಏನೂ ಅರಿಯದ ಕೂಸು. ಎಲ್ಲರೂ ತನ್ನನ್ನು ಏಕೆ ನೋಡುತ್ತಿದ್ದಾರೆ ಎಂದು ತಿಳಿಯದೇ ಎತ್ತಿಕೊಳ್ಳುವಂತೆ ಕೈ ಮಾಡುತ್ತಿದ್ದ ಮಗುವಿನ ನೋಟ ಎಂತಹವರ ಕರುಳು ಚುರುಕ್​ ಎನ್ನಿಸದೇ ಇರದು

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ಗ್ರಾಮದ ಬಳಿ ನಡೆದ ಅಪಘಾತ

By

Published : Oct 19, 2019, 9:42 PM IST

Updated : Oct 19, 2019, 10:01 PM IST

ಕಲಬುರಗಿ : ಲಾರಿ ಹಾಯ್ದು ಆರು ತಿಂಗಳ ಮಗು ಹಾಗೂ ತಾಯಿ ರಸ್ತೆ ಮೇಲೆ ನರಳಾಡಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಆಳಂದ ತಾಲೂಕಿನ ಝಳಕಿ ಗ್ರಾಮದ ಬಳಿ ನಡೆದಿದೆ.

ಝಳಕಿ ಗ್ರಾಮದ ಸುರೇಖಾ(25) ಹಾಗೂ ಆಕೆಯ ಆರು ತಿಂಗಳ ಮಗು ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ‌. ತಾಯಿ ಮಗು ಸೇರಿ ಗ್ರಾಮಕ್ಕೆ ತೆರಳಲೆಂದು ರಸ್ತೆ ದಾಟುವಾಗ ಯಮನ ರೀತಿಯಲ್ಲಿ ಬಂದ ಲಾರಿ ಮುದ್ದು ಕಂದಮ್ಮನ ಜೊತೆ ತಾಯಿ ಮೇಲೆ ಹರಿದಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ಗ್ರಾಮದ ಬಳಿ ನಡೆದ ಅಪಘಾತ

ಇನ್ನೊಂದು ಹೆಜ್ಚೆ ದಾಟಿದ್ರೆ ಮಗುವಿನ ಮುದ್ದಾದ ನಗು ನೋಡುತ್ತಾ ನಲಿಯ ಬೇಕಿದ್ದ ತಾಯಿ ಒಂದು ಕಡೆಯಾದರೆ, ಅರ್ಧ ತುಂಡಾಗಿ ಬಿದ್ದಿದ್ದ ಏನೂ ಅರಿಯದ ಕೂಸು ಮತ್ತೊಂದೆಡೆ. ಎಲ್ಲರೂ ತನ್ನ ಏಕೆ ನೋಡುತ್ತಿದ್ದಾರೆ ಎಂದು ತಿಳಿಯದೇ ಎತ್ತಿಕೊಳ್ಳುವಂತೆ ಕೈ ಮಾಡುತಿತ್ತು. ಮಗನೇ ನೋಡು ಅನ್ನೊ ತಂದೆ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಇತ್ತ ಮಗುವನ್ನು ನೋಡುತ್ತಾ ಪಕ್ಕದಲ್ಲೇ ಮಲಗಿದ್ದ ತಾಯಿ ಏನೂ ಮಾಡದೇ ಪರಿಸ್ಥಿತಿಯಲ್ಲಿ ಜೀವನ್ಮರಣದ ಜೊತೆ ಹೋರಾಟ ನಡೆಸುತ್ತಿದ್ದಳು.

ತಾಯಿಯ ತೆಲೆಗೆ ಬಲವಾದ ಪೆಟ್ಟಾಗಿದ್ದು, ಮಗುವಿನ ಅರ್ಧ ಶರೀರ ತುಂಡಾಗಿ ಮಗು ನರಳಾಡಿ ಕೊನೆಗೂ ಬದುಕುಳಿಯಲಿಲ್ಲ. ತಾಯಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Oct 19, 2019, 10:01 PM IST

ABOUT THE AUTHOR

...view details