ಕಲಬುರಗಿ:ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ 48 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಮುಂದುವರೆದ ಕೊರೊನಾ ಕಂಟಕ: ಇಂದು ಮತ್ತೆ 48 ಜನರಿಗೆ ತಗುಲಿದ ಸೋಂಕು! - Covid 19
ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ 48 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆಯಾಗಿದೆ.
ಕಲಬುರಗಿಗೆ ಕೊರೊನಾ ಕಂಟಕ: ಒಂದೇ ದಿನದಲ್ಲಿ 48 ಜನರಿಗೆ ಸೋಂಕು ದೃಢ..
ಸೋಂಕಿತರಲ್ಲಿ ನಾಲ್ವರು ವಿದೇಶದಿಂದ ವಾಪಸಾದವರಾಗಿದ್ದು, ಅದರಲ್ಲಿ ಮೂವರ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಇಬ್ಬರಿಗೆ ಬೇರೆಯವರಿಂದ ಸೋಂಕು ಹರಡಿದೆ. ಉಳಿದವರೆಲ್ಲಾ ಮುಂಬೈನಿಂದ ವಾಪಸಾದ ವಲಸಿಗರಾಗಿದ್ದಾರೆ. ಈ ಪೈಕಿ 13 ಮಕ್ಕಳು, 14 ಮಹಿಳೆಯರು ಮತ್ತು ಉಳಿದವರು ಪುರಷರುರಾಗಿದ್ದಾರೆ. ಇಂದು 32 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.