ಕಲಬುರಗಿ:ಜಿಲ್ಲೆಯಲ್ಲಿ ಇಂದು 195 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಓರ್ವ ಸೋಂಕಿತ ಮೃತಪಟ್ಟಿದ್ದಾನೆ.
ಕಲಬುರಗಿ: 195 ಜನರಿಗೆ ಕೊರೊನಾ ಸೋಂಕು: ಓರ್ವ ಸಾವು - 195 people have Corona
ಕಲಬುರಗಿಯಲ್ಲಿಂದು 195 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು,140 ಜನರು ಡಿಸ್ಚಾರ್ಜ್ ಆಗಿದ್ದಾರೆ.ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 9840ಕ್ಕೆ ಏರಿಕೆಯಾಗಿದೆ.
ಐಎಲ್‌ಐ ಹಿನ್ನೆಲೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಖಾಜಾ ಕಾಲೋನಿ ನಿವಾಸಿ 76 ವರ್ಷದ ವೃದ್ಧ ಅಗಸ್ಟ್ 14ರಂದು ನಿಧನರಾಗಿದ್ದು, ಮರಣೋತ್ತರ ವೈದ್ಯಕೀಯ ತಪಾಸಣೆಯಿಂದ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 220ಕ್ಕೆ ಏರಿಕೆಯಾಗಿದೆ.
ಇಂದು 195 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 12321 ಹಾಗೂ 140 ಜನರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 9840ಕ್ಕೆ ಏರಿಕೆಯಾಗಿದೆ. 2261 ಪ್ರಕರಣಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.