ಸೇಡಂ/ಕಲಬುರಗಿ: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ಮೇಲ್ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಮೇಲ್ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಪರಿಣಾಮ ಕಲಬುರಗಿಯಿಂದ ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ವಾಗ್ದಾರಿ-ರಿಬ್ಬನಪಲ್ಲಿ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ನದಿಯ ಕಿನಾರೆಯಲ್ಲಿರುವ ಐತಿಹಾಸಿಕ ಟೀಕಾಚಾರ್ಯರ ಮೂಲ ವೃಂದಾವನ ಸಮೀಪಕ್ಕೆ ನೀರು ಬಂದು ನಿಂತಿದ್ದು, ಮೂಲ ವೃಂದಾವನಕ್ಕೆ ನೀರು ನುಗ್ಗುವ ಆತಂಕವಿದೆ. ಅಲ್ಲದೇ, ಪಟ್ಟಣದ ಚೋಟಿಗಿರಣಿ ಬಡಾವಣೆಯ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭೀಕರ ಮಳೆ ಪರಿಣಾಮ ಬಡಾವಣೆಯ ಅನೇಕ ರಸ್ತೆಗಳಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗಿದ್ದು, ಮನೆಯಿಂದ ಹೊರಬರಲಾರದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.