ಕಲಬುರಗಿ:ನಿವೃತ್ತ ಲೋಕಾಯುಕ್ತ ಜಸ್ಟೀಸ್ ವೆಂಕಟಾಚಲ ಅವರ ನಿಧನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ವೆಂಕಟಾಚಲ ಅವರು ಭೀಷ್ಮ ಪಿತಾಮಹನಂತಿದ್ದರು: ಸಚಿವ ಸುರೇಶ್ ಕುಮಾರ್ - ವೆಂಕಟಾಚಲ ಅವರ ನಿಧನ ವೇದನೆ ತಂದಿ
ನಿವೃತ್ತ ಲೋಕಾಯುಕ್ತ ಜಸ್ಟೀಸ್ ವೆಂಕಟಾಚಲ ಅವರ ನಿಧನ ವೇದನೆ ತಂದಿದೆ. ನಮ್ಮ ಮನೆಯ ಹಿರಿಯ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದರು.
ಸುರೇಶ್ ಕುಮಾರ್
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆ ಏನೆಂಬುದನ್ನು ತೋರಿಸಿಕೊಟ್ಟು, ಭೀಷ್ಮ ಪಿತಾಮಹನಂತಿದ್ದರು. ಅವರ ವಿನಯತೆ, ಸರಳತೆ ನಮಗೆ ಮಾರ್ಗದರ್ಶಕವಾಗಿತ್ತು.
ದೊಡ್ಡ ಮಹನೀಯರೊಬ್ಬರು ನಿಧನರಾಗಿದ್ದಾರೆ. ಈ ಸುದ್ದಿಯಿಂದ ವೇದನೆಯಾಗಿದೆ. ನಮ್ಮ ಮನೆಯ ಹಿರಿಯ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಸುರೇಶ್ ಕುಮಾರ್ ಕಂಬನಿ ಮಿಡಿದಿದ್ದಾರೆ.