ಕಲಬುರಗಿ: ಕೋವಿಡ್ -19 ಸೋಂಕಿಗೊಳಗಾಗಿ ನಗರದ ಬುದ್ಧವಿಹಾರ ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕಲಬುರಗಿ ಪೀಠದ ಮಹಿಳಾ ಸಿಬ್ಬಂದಿಗೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಹೂಗುಚ್ಛ ನೀಡಿ ಸನ್ಮಾನಿಸಿದರು.
ಕೋವಿಡ್ ಗುಣಮುಖನಾದ ಸಿಬ್ಬಂದಿಗೆ ನ್ಯಾಯಮೂರ್ತಿಯಿಂದ ಸನ್ಮಾನ - ಕಲಬುರಗಿ ಕೊರೊನಾ ಪ್ರಕರಣಗಳು
ಕೊರೊನಾ ಸೋಂಕಿನಿಂದ ಗುಣಮುಖರಾದ ಕರ್ನಾಟಕ ಉಚ್ಛ ನ್ಯಾಯಾಲಯ ಕಲಬುರಗಿ ಪೀಠದ ಮಹಿಳಾ ಸಿಬ್ಬಂದಿಯನ್ನು ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಸನ್ಮಾನಿಸಿದರು.
![ಕೋವಿಡ್ ಗುಣಮುಖನಾದ ಸಿಬ್ಬಂದಿಗೆ ನ್ಯಾಯಮೂರ್ತಿಯಿಂದ ಸನ್ಮಾನ justice-ba-patil-honored-by-covid-recovery-patient](https://etvbharatimages.akamaized.net/etvbharat/prod-images/768-512-8300425-262-8300425-1596619087059.jpg)
ಕೋವಿಡ್ ಗುಣಮುಖ ಸಿಬ್ಬಂದಿ ಸನ್ಮಾನಿಸಿದ ನ್ಯಾಯಮೂರ್ತಿ
ನಂತರ ಮಾತನಾಡಿದ ನ್ಯಾಯಮೂರ್ತಿಗಳು, ನೀವು ನಮ್ಮೆಲ್ಲರ ಕುಟುಂಬದ ಸದಸ್ಯರಿದ್ದಂತೆ. ಯಾವುದೇ ಅಂಜಿಕೆಯಿಲ್ಲದೆ ಕರ್ತವ್ಯ ನಿರ್ವಹಿಸುವಂತೆ ಧೈರ್ಯ ತುಂಬಿದರು. ಜೊತೆಗೆ ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಕರೆ ನೀಡಿದರು.