ಕರ್ನಾಟಕ

karnataka

ETV Bharat / state

ಜುಲೈ 5ರಿಂದ ಆಗಸ್ಟ್‌ 2 ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್: ಕಲಬುರಗಿ ಜಿಲ್ಲಾಧಿಕಾರಿ

ಜಿಲ್ಲೆಯಾದ್ಯಂತ ಜು.5 ರಿಂದ ಆ. 2 ರವರೆಗೆ ಪ್ರತಿ ಭಾನುವಾರದಂದು ಲಾಕ್‍ಡೌನ್ ಘೋಷಿಸಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಹೊರಡಿಸಿದ್ದಾರೆ.

Kalburgi  DC order
ಜಿಲ್ಲಾಧಿಕಾರಿ ಬಿ ಶರತ್

By

Published : Jul 1, 2020, 11:40 AM IST

ಕಲಬುರಗಿ: ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಜು.5 ರಿಂದ ಆ. 2 ರವರೆಗೆ ಪ್ರತಿ ಭಾನುವಾರದಂದು ಪೂರ್ಣದಿನದ ಲಾಕ್‍ಡೌನ್ ಘೋಷಿಸಲಾಗಿದೆ.

ಆದೇಶ ಪ್ರತಿ
ಲಾಕ್‍ಡೌನ್ ಪ್ರಯುಕ್ತ ಜಿಲ್ಲೆಯಾದ್ಯಂತ ರಾತ್ರಿ 8 ರ ನಂತರ ಅವಶ್ಯಕ ಸರಕು, ಸಾಮಗ್ರಿ ಮತ್ತು ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಜಿಲ್ಲೆಯನ್ನು ಸ್ತಬ್ಧಗೊಳಿಸಬೇಕು ಎಂದು ಸೂಚಿಸಲಾಗಿದೆ.

ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ರಾತ್ರಿ 8ರ ನಂತರ ಎಲ್ಲ ತರಹದ ಮದ್ಯ ಮಾರಾಟವನ್ನೂ ಸಹ ನಿಷೇಧಿಸುವಂತೆ ಸೂಚಿಸಲಾಗಿದೆ.

ABOUT THE AUTHOR

...view details