ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಜೋಕುಮಾರ ಸ್ವಾಮಿ ಹಬ್ಬ ಆಚರಣೆ - ಕಲಬುರಗಿಯಲ್ಲಿ ಜೋಕುಮಾರ ಸ್ವಾಮಿ ಹಬ್ಬ ಆಚರಣೆ

ಉತ್ತರ ಕರ್ನಾಟಕ ಭಾಗದ ಮಂದಿ ಹಿಂದಿನ ಆಚರಣೆಗಳನ್ನ ಇಂದಿಗೂ ಬಹಳ ಅಚ್ಚುಕಟ್ಟಾಗಿ ಮುಂದುವರಿಸುತ್ತಾ ಬಂದಿದ್ದಾರೆ. ಅಂತೆಯೇ ಭೂಮಂಡಲಕ್ಕೆ ಶಿವನು ಕಳುಹಿಸಿದ ಎನ್ನಲಾದ ಜೋಕುಮಾರ ಸ್ವಾಮಿ ಹಬ್ಬ ಕೂಡ ಇವರ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.

jokumaraswami festival celebration
ಜೋಕುಮಾರ ಸ್ವಾಮಿ ಹಬ್ಬ ಆಚರಣೆ

By

Published : Aug 31, 2020, 8:35 PM IST

ಕಲಬುರಗಿ: ಭೂಮಂಡಲದಲ್ಲಿನ ಮಳೆ- ಬೆಳೆ ಬಗ್ಗೆ ಶಿವನಿಗೆ ವರದಿ ಸಲ್ಲಿಸಲು ಭೂಮಿಗೆ ಬರ್ತಾನೆ ಎಂಬ ಪ್ರತೀತಿ ಇರುವ ಜೋಕುಮಾರ ಸ್ವಾಮಿಯ ಹಬ್ಬ ಇಂದಿಗೂ ಉತ್ತರ ಕರ್ನಾಟಕದಲ್ಲಿ ಜೀವಂತವಿದೆ.

ಭಾದ್ರಪದ ಮಾಸದ ಅಷ್ಟಮಿ ದಿನದಂದು ಹುಟ್ಟುವ ಜೋಕುಮಾರ ಸ್ವಾಮಿಯನ್ನು ತಳವಾರ ಸಮುದಾಯದ ಮಹಿಳೆಯರು ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮನೆಮನೆಗೆ ಹೋಗುತ್ತಾರೆ. ಜೋಕುಮಾರ ಸ್ವಾಮಿಯ ಜಾನಪದ ಹಾಡುಗಳನ್ನು ಹಾಡುವ ಮೂಲಕ ಜೋಕುಮಾರ ನಿಮ್ಮ ಮನೆಗೆ ಬಂದಿದ್ದಾನೆ ಎಂಬ ಸಂದೇಶವನ್ನು ನೀಡುತ್ತಾರೆ. ಜನರು ಜೋಳ, ಅಕ್ಕಿ ಸೇರಿ ಇತರೆ ದವಸ-ಧಾನ್ಯ ಹಣ ನೀಡುತ್ತಾರೆ. ಜೋಕುಮಾರ ಸ್ವಾಮಿಗೆ ಬೆಣ್ಣೆ ಹಚ್ಚಿ ಪೂಜೆ ಸಲ್ಲಿಸಿದರೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇರುವ ಕಾರಣ ಮಕ್ಕಳಿಲ್ಲದವರು ಜೋಕುಮಾರನಿಗೆ ಬೆಣ್ಣೆ ಹಚ್ಚಿ ಪೂಜೆ ಸಲ್ಲಿಸುತ್ತಾರೆ.

ಜೋಕುಮಾರ ಸ್ವಾಮಿ ಹಬ್ಬ ಆಚರಣೆ
ಏಳು ದಿನಗಳ ಕಾಲ ಭೂ ಸಂಚಾರ ಮುಗಿಸಿ 8ನೇ ದಿನಕ್ಕೆ ಶಿವನ ಬಳಿ ತೆರಳಿ ಕಷ್ಟ ಸಂಕಷ್ಟಗಳನ್ನು ವಿವರಿಸುತ್ತಾನೆ. ಬಳಿಕ ಮಳೆ-ಬೆಳೆ ಸಮೃದ್ಧಗೊಂಡು ರೈತರು ಬಡವರಿಗೆ ಅನುಕೂಲ ಕಲ್ಪಿಸುತ್ತಾನೆ ಎಂಬ ಪ್ರತೀತಿ ಇದೆ. ಜೋಕುಮಾರ ಭೂಮಿಯಿಂದ ಹೋಗುವಾಗ ಗಲಾಟೆ ಮಾಡಿಕೊಂಡು ಸಾವನ್ನಪ್ಪುತ್ತಾನೆ ಎನ್ನುವದು ಹಿರಿಕರ ಮಾತು. ಹೀಗಾಗಿ ಇಂದಿಗೂ ಜೋಕುಮಾರ ಏಳು ದಿನ ಭೂ ಸಂಚಾರ ಮುಗಿದ ಬಳಿಕ ಏಳನೇ ದಿನ ರಾತ್ರಿ ಎಲ್ಲರೂ ಮಲಗಿದ ಮೇಲೆ ಒನಕೆಯಿಂದ ಜೋಕುಮಾರನ ತಲೆ ಒಡೆಯುವ ವಾಡಿಕೆಯಿದೆ. ನಂತರ ಮೂರ್ತಿಯನ್ನು ದಫನ್ ಮಾಡುವ ಮೂಲಕ ಜೋಕುಮಾರ ಹಬ್ಬಕ್ಕೆ ತೆರೆ ಎಳೆಯುತ್ತಾರೆ.

ಜೋಕುಮಾರ ಸ್ವಾಮಿ ಹಬ್ಬ ಆಚರಣೆಯ ಹಿನ್ನೆಲೆ:

ಗಣೇಶ ನಿಮಜ್ಜನೆಯಾದ ಮಾರನೆ ದಿನ ಜನಿಸುವ ಜೋಕುಮಾರ ಸ್ವಾಮಿ ಶಿವನ ಪುತ್ರ ಎನ್ನಲಾಗುತ್ತದೆ. ಪಾರ್ವತಿ ಪುತ್ರ ಗಣೇಶ ಭೂಮಿಗೆ ಬಂದು ಐದು ದಿನ ನೆಲೆಸುತ್ತಾನೆ. ಗಣೇಶನ ಬರುವಿಕೆ ಶ್ರೀಮಂತಿಕೆಯಲ್ಲಿ ಸ್ವಾಗತ ನಡೆದು ಐದು ದಿನ ಭಕ್ಷ ಭೋಜನ ನೀಡಿ ಸಂಭ್ರಮದಿಂದ ಕಳಿಸಲಾಗುತ್ತೆ. ಹೀಗಾಗಿ ಬಡವರ ಮತ್ತು ರೈತರ ಕಷ್ಟ ಅರಿಯದ ಗಣೇಶ, ಭೂಮಂಡಲದಲ್ಲಿ ಎಲ್ಲವು ಸಮೃದ್ಧಿಯಾಗಿದೆ, ಮಳೆ ಬೆಳೆ ಸಕಾಲಕ್ಕೆ ಬಂದು ಎಲ್ಲರು ಸಮೃದ್ಧರಾಗಿದ್ದಾರೆಂಬ ವರದಿ ನೀಡ್ತಾನಂತೆ. ಆದ್ರೆ ತ್ರಿಲೋಕದಾರಿ ಶಿವ, ಜೋಕುಮಾರನಿಗೆ ಭೂಮಿಗೆ ಹೋಗಿ ವರದಿ ಸಂಗ್ರಹಿಸುವಂತೆ ಹೇಳ್ತಾನಂತೆ, ಆಗ ಭೂಮಿಯಲ್ಲಿ ಜನಿಸುವ ಜೋಕುಮಾರ ಸ್ವಾಮಿ ಭೂತಾಯಿ ಮಡಿಲಿನಲ್ಲಿರುವ ಬಡ ಹಾಗೂ ರೈತರ ಸಂಕಷ್ಟವನ್ನು ಶಿವನಿಗೆ ವರದಿ ಮಾಡುತ್ತಾನೆ ಎಂಬ ನಂಬಿಕೆ ಇದೆ.

ABOUT THE AUTHOR

...view details