ಕಲಬುರಗಿ :ಮಹಾನಗರ ಪಾಲಿಕೆ ಗದ್ದುಗೆ ಗುದ್ದಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಿಂಗ್ ಮೇಕರ್ ಜೆಡಿಎಸ್ ನಾಯಕರು, ಮೇಯರ್ ಸ್ಥಾನ ನೀಡಿದವರಿಗೆ ಮಾತ್ರ ತಮ್ಮ ಬೆಂಬಲ ಎಂದು ಘೋಷಿಸಿಕೊಂಡಿದ್ದಾರೆ.
ಜೆಡಿಎಸ್ ನಾಯಕರು ಪಟ್ಟು ಹಿಡಿದು ಕುಳಿತಿರುವುದು ಎರಡು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುಪ್ಪವಾಗಿದೆ. ಜೆಡಿಎಸ್ಗೆ ಯಾರು ಮೇಯರ್ ಸ್ಥಾನ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಜೆಡಿಎಸ್ ಮುಖಂಡ ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ತಿಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಆಹ್ವಾನಕ್ಕೆ ಬಂದರೂ ಸ್ವಾಗತಿಸುತ್ತೇವೆ. ಆದರೆ, ಕಾಂಗ್ರೆಸ್ ನಾಯಕರಿಗೆ ನಮ್ಮ ಜೊತೆಗೆ ಮಾತನಾಡುವಷ್ಟು ಸೌಜನ್ಯ ಸಹ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಬಿಟ್ಟರೆ ಕಾಂಗ್ರೆಸ್ ಯಾವ ನಾಯಕರು ಜೆಡಿಎಸ್‌ನವರನ್ನು ಸಂಪರ್ಕ ಮಾಡಿಲ್ಲ. ಆದರೆ, ಬಿಜೆಪಿಯಿಂದ ಸಾಕಷ್ಟು ಜನರು ನಮ್ಮನ್ನು ಸಂಪರ್ಕಿಸಿದ್ದಾರೆ.