ಕರ್ನಾಟಕ

karnataka

ETV Bharat / state

ಕಲಬುರಗಿ: ಲಾರಿ ತಡೆದು ದರೋಡೆಗೆ ಯತ್ನಿಸಿದ ಮೂವರು ಅರೆಸ್ಟ್​ - Kalaburagi crime news

ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ಲಾರಿ ತಡೆದು ದರೋಡೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.

Kalaburagi
ಕಲಬುರಗಿ

By

Published : Oct 28, 2020, 5:52 PM IST

ಕಲಬುರಗಿ: ಜಿಲ್ಲೆಯ ಜೇವರ್ಗಿ ಬಳಿ ಲಾರಿ ತಡೆದು ದರೋಡೆಗೆ ಯತ್ನಿಸಿದ ಮೂವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.

ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಗಿರೀಶ್ ತುಂಬಗಿ, ರವಿಚಂದ್ರ ಗುತ್ತೇದಾರ್, ರೌಡಿಶೀಟರ್ ಗುಂಡು ಗುತ್ತೇದಾರ್ ಬಂಧಿತ ಆರೋಪಿಗಳು. ಜೇವರ್ಗಿ ತಾಲೂಕಿನ ಕಲ್ಲೂರ್ - ಅವರಾದ್ ಮಾರ್ಗ ಮಧ್ಯೆ ಅಕ್ಕಿ ತುಂಬಿದ ಲಾರಿ ತಡೆದು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದೀರಿ ಎಂದು ಹೆದರಿಸಿ ಲಾರಿ ಮಾಲಿಕನಿಂದ 5 ಲಕ್ಷ ಬೇಡಿಕೆ ಇಟ್ಟು ಮೂರುವರೆ ಲಕ್ಷ ಹಣ ವಸೂಲಿ ಮಾಡಿದ್ದಾರೆಂಬ ದೂರು ದಾಖಲಾಗಿದೆ.

ಲಾರಿ ತಡೆದು ದರೋಡೆಗೆ ಯತ್ನಿಸಿದ ಮೂವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಜೇವರ್ಗಿ ಠಾಣೆ ಪೊಲೀಸರು ತೆಲೆ ಮರೆಸಿಕೊಂಡಿದ್ದ ಮೂವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಿ ಮರಿಯಂ ಜಾರ್ಜ್ ತಿಳಿಸಿದ್ದಾರೆ‌.

ABOUT THE AUTHOR

...view details