ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಕಲಬುರಗಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್ಪಿಪಿ) ಕಟ್ಟುವ ಮೂಲಕ ಗಾಲಿ ಜನಾರ್ದನ ರೆಡ್ಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಕಲ್ಯಾಣ ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಅವರು ಸೇಡಂ ವಿಧಾನಸಭೆ ಕ್ಷೇತ್ರದಲ್ಲಿ ಅಬ್ಬರ ಶುರು ಮಾಡಿದ್ದಾರೆ. ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಿರುವ ರೆಡ್ಡಿ ಮತಗಳ ಕ್ರೂಢೀಕರಣಕ್ಕೆ ಮುಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿದೆ.
ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆ ರಂಗು ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡು ಮತಬೇಟೆ ನಡೆಸುತ್ತಿವೆ. ಈ ನಡುವೆ ಬಳ್ಳಾರಿಯ ಗಾಲಿ ಜನಾರ್ದನ ರೆಡ್ಡಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟುಹಾಕಿ ರಾಜ್ಯ ರಾಜಕೀಯಲ್ಲಿ ತಲ್ಲಣ ಮೂಡಿಸಿದ್ದಾರೆ. ಕಲ್ಯಾಣ ಕಲ್ಯಾಣದ 41 ವಿಧಾನಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ ಜನಾರ್ದನ ರೆಡ್ಡಿ ಬಿಸಿಲೂರು ಕಲಬುರಗಿಯ ಸೇಡಂ ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಸೇಡಂ ಕ್ಷೇತ್ರದಲ್ಲಿ ಬೃಹತ್ ಬಹಿರಂಗ ಸಮಾವೇಶದ ಮೂಲಕ ಸೇಡಂ ಕ್ಷೇತ್ರಕ್ಕೆ ಕಾಲಿಟ್ಟಿರುವ ರೆಡ್ಡಿ ಸಮುದಾಯದ ಮತ ಬೇಟೆಗೆ ಮುಂದಾಗಿದ್ದಾರೆ. ರೆಡ್ಡಿ ಏಂಟ್ರಿ ಬೆನ್ನಲ್ಲೆ ಕಾಂಗ್ರೆಸ್, ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳಿಗೆ ಟೆನ್ಷನ್ ಶುರುವಾಗಿದೆ.
ಇದನ್ನೂ ಓದಿ:ಇನ್ಮುಂದೆ ನನ್ನಿಂದ ಹಲವರಿಗೆ ಶಾಕ್ ಕಾದಿದೆ: ಜನಾರ್ದನ ರೆಡ್ಡಿ ಗುಡುಗು
ಲಲ್ಲೇಶ್ ರೆಡ್ಡಿ ಹೆಸರು ಘೋಷಣೆ:ಸೇಡಂ ವಿಧಾನಸಭೆ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ 40 ಸಾವಿರಕ್ಕೂ ಹೆಚ್ವು ಮತಗಳಿದ್ದು, ಯಾವುದೇ ಪಕ್ಷದ ಅಭ್ಯರ್ಥಿ ಗೆಲುವಿಗೆ ರೆಡ್ಡಿ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ರೆಡ್ಡಿ ಸಮಾಜದ ಮತಗಳ ಮೇಲೆ ಕಣ್ಣಿಟ್ಟಿರುವ ಜನಾರ್ಧನ ರೆಡ್ಡಿ, ಕ್ಷೇತ್ರದಲ್ಲಿ ಸಂಬಂಧಿ ಲಲ್ಲೇಶ್ ರೆಡ್ಡಿಯವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಬೃಹತ್ ಸಮಾವೇಶದ ಮೂಲಕ ಲಲ್ಲೇಶ್ ರೆಡ್ಡಿ ಹೆಸರು ಘೋಷಣೆ ಮಾಡಿದ್ದಾರೆ.
ಈಗಾಗಲೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿರುವ ರೆಡ್ಡಿ ಸಮಾಜದ ಮುಖಂಡರನ್ನು ಕೆಆರ್ಪಿಪಿ ಪಕ್ಷಕ್ಕೆ ಸೆಳೆಯಲು ಯತ್ನಿಸಿದ್ದಾರೆ. ಕಾಂಗ್ರೆ ಹಾಗೂ ಬಿಜೆಪಿಯಿಂದ ರೆಡ್ಡಿ ಸಮಾಜದ ಮುಖಂಡರು ಕೆಆರ್ಪಿಪಿ ಕೈ ಹಿಡಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಹೊಡೆತ ಬೀಳಲಿದೆ. ಬೃಹತ್ ಬಹಿರಂಗ ಸಮಾವೇಶದ ಮೂಲಕ ಜನಾರ್ಧನ ರೆಡ್ಡಿ ಕಾಂಗ್ರೆಸ್, ಬಿಜೆಪಿ ವಿರುದ್ದ ಸಿಡಿಲಿನಂತೆ ಗುಡುಗಿದ್ದಾರೆ. ಹುಲಿ ಏಂಟ್ರಿ ಆಗಿದೆ. ಸೇಡಂನ ಎರಡು ಜಿಂಕೆಗಳು ಗೂಡು ಸೇರುತ್ತವೆ ಎಂದು ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ್ ಮತ್ತು ಹಾಲಿ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.ಒಟ್ಟಿನಲ್ಲಿ ತಮ್ಮದೇ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟ ಜನಾರ್ದನ ರೆಡ್ಡಿ ಸೇಡಂ ಕ್ಷೇತ್ರದಲ್ಲಿ ಸಂಬಂಧಿಯನ್ನೇ ಕಣಕ್ಕಿಳಿಸಿದ್ದಾರೆ. ಇಲ್ಲಿ ಗೆಲುವಿಗೆ ಎಲ್ಲಾ ರೀತಿಯ ಕಸರತ್ತು ಆರಂಭಿಸಿದ್ದಾರೆ.
ಇದನ್ನೂ ಓದಿ:ಕೆಆರ್ಪಿಪಿ ಪಕ್ಷವು ಯಾವುದೇ ರಾಷ್ಟ್ರೀಯ ಪಕ್ಷದ ಬಿ ಟೀಮ್ ಅಲ್ಲ: ಜನಾರ್ದನ ರೆಡ್ಡಿ