ಕರ್ನಾಟಕ

karnataka

ETV Bharat / state

ಕಲಬುರಗಿ: ಜ.10ಕ್ಕೆ ಡಾ.ಪಿ.ಎಸ್.ಶಂಕರ್ ಶ್ರೇಷ್ಠ ವೈದ್ಯಶ್ರೀ ಪ್ರಶಸ್ತಿ ಪ್ರದಾನ - Latest News For Kalburgi

ಕಲಬುರಗಿ ಪ್ರತಿಷ್ಠಿತ ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಕೊಡುವ ಪ್ರಶಸ್ತಿಗೆ ಹೆಸರು ಪ್ರಕಟಿಸಲಾಗಿದ್ದು ಕಾರ್ಯಕ್ರಮ ಜ.10 ರಂದು ನಡೆಯಲಿದೆ.

Jan 10th Dr. P.S Shankar Named Award Program In Kalburgi
ಜ.10ಕ್ಕೆ ಡಾ.ಪಿ.ಎಸ್.ಶಂಕರ್ ಪ್ರಶಸ್ತಿ ಪ್ರಧಾನ ಸಮಾರಂಭ

By

Published : Dec 29, 2019, 5:49 PM IST

ಕಲಬುರಗಿ: ಪ್ರತಿಷ್ಠಿತ ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಕೊಡುವ ಪ್ರಶಸ್ತಿಗೆ ಹೆಸರು ಪ್ರಕಟಿಸಲಾಗಿದ್ದು ಕಾರ್ಯಕ್ರಮ ಜ.10 ರಂದು ನಡೆಯಲಿದೆ.

ಡಾ.ಪಿ.ಎಸ್ ಶಂಕರ್ ಶ್ರೇಷ್ಠ ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ವಿಜಯಪುರದ ಡಾ.ಲಕ್ಷ್ಮಣ ಹಣಮಂತಪ್ಪ ಬಿದರಿ ಹಾಗೂ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಎಚ್.ಎಲ್ ಬಸವರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಹತ್ತು ವಿದ್ಯಾರ್ಥಿಗಳನ್ನು ವೈದ್ಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗಿದೆ.

ಮಕ್ಕಳ ತಜ್ಞರಾಗಿರುವ ಹಣಮಂತಪ್ಪ ಬಿದರಿ ಅವರು ಆಯ್ಕೆಯಾಗಿದ್ದಾರೆ. ನವಜಾತ ಶಿಶುಗಳಿಂದ ಹಿಡಿದು ದೊಡ್ಡ ಮಕ್ಕಳಿಗೆ ಸಹ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಸಿಗುವ ಆಸ್ಪತ್ರೆ ಸ್ಥಾಪಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸಾ ಸೇವೆ ಜೊತೆಗೆ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇನ್ನೂ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಎಚ್.ಎಲ್ ಬಸವರಾಜು ರಚಿಸಿದ ವೈದ್ಯಕೀಯ ಪ್ರಯೋಗಾಲಯ ದರ್ಶನ ಕೃತಿಯನ್ನು ಆಯ್ಕೆ ಮಾಡಲಾಗಿದೆ.‌ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಕನ್ನಡದ ಮೊಟ್ಟ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕೃತಿ ಒಟ್ಟು 750 ಪುಟಗಳನ್ನು ಒಳಗೊಂಡಿದೆ.

ಪ್ರತಿ ವರ್ಷದಂತೆ ಈ ವರ್ಷ ಕೊಡ 10 ಬಡ ವೈದ್ಯಕೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ABOUT THE AUTHOR

...view details