ಕರ್ನಾಟಕ

karnataka

ETV Bharat / state

ಅಂತಾರಾಜ್ಯ ಮೂವರು ಕಳ್ಳರ ಬಂಧನ, 40 ಬೈಕ್​ ವಶ - bike thieves arrest

ಕಲಬುರಗಿಯ ನರೋಣ ಪೊಲೀಸರು ಅನುಮಾನಗೊಂಡು ಬಂಧಿಸಿದ ಆರೋಪಿಗಳಿಂದ ಬರೋಬ್ಬರಿ 40 ಬೈಕ್​ಗಳನ್ನು ವಶಕ್ಕೆ ಪಡೆದು, ನರೋಣಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

inter state thieves arrested in kalburgi
ಅಂತಾರಾಜ್ಯ ಮೂವರು ಕಳ್ಳರ ಬಂಧನ

By

Published : Sep 12, 2020, 12:09 AM IST

ಕಲಬುರಗಿ: ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದು, ಆರೋಪಿಗಳಿಂದ 40 ಬೈಕ್​ಗಳನ್ನು ನರೋಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಸ್ಮಾಯಿಲ್ ಜಮಾದಾರ (26), ಗಫಾರ್ ಜಮಾದಾರ (20), ದೂಳಪ್ಪ ಸೂತ್ತಾರ (36) ಬಂಧಿತರು. ಇನ್ನೋರ್ವ ಆರೋಪಿ ಗೌಸ್ ಮಹ್ಮದ್ ತೆಲೆ ಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಅಂತಾರಾಜ್ಯ ಮೂವರು ಕಳ್ಳರ ಬಂಧನ

ನರೋಣಾ ಪೊಲೀಸರು ನಿನ್ನೆ ಬೆಳಗಿನ ಜಾವ ಗಸ್ತು ತಿರುಗುವ ಸಮಯದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಇವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಕಲಬುರಗಿ ಹಾಗೂ ಬೀದರ್ ಮೂಲದವರಾದ ಆರೋಪಿಗಳು ಕಲಬುರಗಿ ಕೇಂದ್ರಿಯ ವಿವಿ ಗೇಟ್, ಕಮಲಾಪೂರ, ಮಹಾಗಾಂವ, ಕಲಬುರಗಿ ನಗರದ ಹಲವೆಡೆ ಹಾಗೂ ಬೀದರ್​ ಜಿಲ್ಲೆಯಲ್ಲಿ ಮತ್ತು ಪಕ್ಕದ ತೆಲಂಗಾಣ ಸೇರಿ ಬರೋಬ್ಬರಿ 40 ಬೈಕ್​ಗಳನ್ನು ಕಳ್ಳತನ ಮಾಡಿದ್ದಾರೆ.

ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details