ಕರ್ನಾಟಕ

karnataka

ETV Bharat / state

ಅನ್ಯಜಾತಿ ವಿವಾಹ: ಯುವತಿ ಪೋಷಕರಿಂದ ಮಾರಣಾಂತಿಕ ಹಲ್ಲೆ, ಯುವಕನ ತಂದೆ ಸಾವು - Kalburgi crime news

ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ಚಾಮನೂರು ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯ ಪೋಷಕರು ಯುವಕನ ಮನೆಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.

ಯುವಕನ ತಂದೆ ಸಾವು
ಯುವಕನ ತಂದೆ ಸಾವು

By

Published : Jun 12, 2022, 12:21 PM IST

ಕಲಬುರಗಿ: ಅನ್ಯಜಾತಿಯ ಯುವಕನ ಪ್ರೀತಿಸಿ‌ ಮದುವೆಯಾದಳು ಎಂಬ ಸಿಟ್ಟಿನಲ್ಲಿ ಯುವಕನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ತಂದೆ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಚಾಮನೂರ‌ ಗ್ರಾಮದ ದಶರಥ ಪೂಜಾರಿ ಸಾವನ್ನಪ್ಪಿದ ದುರ್ದೈವಿ. ಜೂನ್ 02 ರಂದು ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ಚಾಮನೂರು ಗ್ರಾಮದಲ್ಲಿ ದುಷ್ಕೃತ್ಯ ನಡೆದಿತ್ತು. ಗ್ರಾಮದ ಸೂರ್ಯಕಾಂತ ಎಂಬುವರು ಇದೇ ಗ್ರಾಮದ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸಿ ವರ್ಷದ ಹಿಂದೆ ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು.

ತಮ್ಮ ಮಗವಿನ ನಾಮಕರಣಕ್ಕೆಂದು ದಂಪತಿ ಚಾಮನೂರ ಗ್ರಾಮಕ್ಕೆ ಆಗಮಿಸಿದ್ದರು. ತೊಟ್ಟಿಲು ಕಾರ್ಯಕ್ರಮ ಮುಗಿಸಿ ಇನ್ನೇನು ಬೆಂಗಳೂರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾಗ ದಿಢೀರ್​ ಯುವಕನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕೈಗೆ ಸಿಕ್ಕ ಸಿಕ್ಕವರ ಮೇಲೆ ಕೊಡಲಿ, ಕಟ್ಟಿಗೆಯಿಂದ ಹಲ್ಲೆ ಮಾಡಿದ್ದರು. ಯುವತಿಯ ತಂದೆ ದ್ಯಾವಪ್ಪ ಮಾಲಗತ್ತಿ ಹಾಗೂ ಸಹೋದರರು ಸೇರಿ ಕೃತ್ಯ ಎಸಗಿದ್ದಾರೆೆಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಯುವಕ, ಯುವತಿ, ಯುವಕನ‌ ತಂದೆ ಗಂಭೀರವಾಗಿ ಗಾಯಗೊಂಡು ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಇಂದು ಚಿಕಿತ್ಸೆ ಫಲಿಸದೆ ದಶರಥ ಪೂಜಾರಿ ಸಾವನ್ನಪ್ಪಿದ್ದಾರೆ.‌ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಜಮ್ಮು ಕಾಶ್ಮೀರ: ಪೊಲೀಸ್‌ ಅಧಿಕಾರಿ ಕೊಂದ ಉಗ್ರ ಸೇರಿ ಎಲ್‌ಇಟಿಯ ಮೂವರ ಹತ್ಯೆ

ABOUT THE AUTHOR

...view details