ಕಲಬುರಗಿ:ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ಕಲಬುರಗಿಯ ಶಹಾಬಾದ್ ತಾಲೂಕಿನ ತೊನಸಳ್ಳಿ ಗ್ರಾಮ ಪಂಚಾಯತ್ ಪಿಡಿಓ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹರಿದ ರಾಷ್ಟ್ರಧ್ವಜ ಹಾರಿಸಿದ ಆರೋಪ: ಗ್ರಾ.ಪಂ ಪಿಡಿಒ ವಿರುದ್ಧ ದೂರು - Insult to the national flag
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದಡಿ ಕಲಬುರಗಿ ಜಿಲ್ಲೆಯ ತೊನಸಳ್ಳಿ ಗ್ರಾಮ ಪಂಚಾಯತ್ ಪಿಡಿಓ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತೊನಸಳ್ಳಿ ಗ್ರಾಮ ಪಂಚಾಯ್ತಿ
ಗ್ರಾ.ಪಂ ಪಿಡಿಓ ಶ್ರವಣಕುಮಾರ್ ಸ್ವಾಮಿ ಎಂಬುವರು ಗ್ರಾಮ ಪಂಚಾಯತ್ ಎದುರು ಹರಿದ ಹಳೆಯ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಿದ್ದ ಆರೋಪದ ಮೇಲೆ ಶಹಾಬಾದ್ ತಾ.ಪಂ. ಇ.ಓ ಲಕ್ಷ್ಮಣ ಶ್ರೀಂಗೇರಿ ದೂರು ನೀಡಿದ್ದಾರೆ.

ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.