ಸೇಡಂ: ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರು ಹೆಚ್ಚಳವಾಗುತ್ತಿದ್ದು, ತಾಲೂಕು ಆಡಳಿತ ಗುರುವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪಟ್ಟಣದ ಬಸ್ ನಿಲ್ದಾಣದ ಬಳಿ ಸಹಾಯಕ ಆಯುಕ್ತ ರಮೇಶ ಕೋಲಾರ ನೇತೃತ್ವದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು.
ಹೆಚ್ಚಿದ ಕೊರೊನಾ ಸೋಂಕು: ತಾಲೂಕು ಆಡಳಿತದಿಂದ ಜನಜಾಗೃತಿ - Awareness on Corona
ಸೇಡಂ ಪಟ್ಟಣದ ಬಸ್ ನಿಲ್ದಾಣದ ಬಳಿ ಸಹಾಯಕ ಆಯುಕ್ತ ರಮೇಶ ಕೋಲಾರ ನೇತೃತ್ವದಲ್ಲಿ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಕೊರೊನಾ ಕುರಿತ ಜಾಗೃತಿ
ಈ ವೇಳೆ ಮಾತನಾಡಿದ ಎಸಿ ರಮೇಶ ಕೋಲಾರ, ಕೊರೊನಾ ಮಹಾಮಾರಿಯ ಕೊಂಡಿ ಕಳಚಬೇಕಾದರೆ ಸಾಬೂನಿನಿಂದ ಕೈ ತೊಳೆಯುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅತಿಮುಖ್ಯವಾಗಿದ್ದು, ಸಾರ್ವಜನಿಕರು ತಾಲೂಕು ಆಡಳಿತದ ಜೊತೆಗೆ ಸಹಕರಿಸಿ, ಕೊರೊನಾದಿಂದ ಮುಕ್ತರಾಗಲು ಮುಂದಾಗಬೇಕು ಎಂದು ಕೋರಿದರು.
ಈ ವೇಳೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ, ಬಿಜೆಪಿ ಮುಖಂಡರಾದ ವಿರೇಶ ಹೂಗಾರ, ಶ್ರೀಮಂತ ಅವಂಟಿ ಇನ್ನಿತರರು ಇದ್ದರು.