ಕರ್ನಾಟಕ

karnataka

ETV Bharat / state

ಇಂದಿನಿಂದ ಕಲಬುರಗಿ ಮತ್ತು ತಿರುಪತಿ ವಿಮಾನಯಾನ ಆರಂಭ - ಇಂದಿನಿಂದ ಕಲಬುರಗಿ ಮತ್ತು ತಿರುಪತಿ ವಿಮಾನಯಾನ ಆರಂಭ

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಇನ್ಮುಂದೆ ಜಿಲ್ಲೆಯ ಜನ ಹರಸಾಹಸ ಪಡಬೇಕಾದ ಅವಶ್ಯಕತೆ ಇಲ್ಲ. ಇಂದಿನಿಂದ ವಿಮಾನ ಸೇವೆ ಲಭ್ಯವಾಗಲಿದೆ. ಆರಂಭಿಕವಾಗಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಹೀಗೆ ವಾರದಲ್ಲಿ ನಾಲ್ಕು ದಿನ ಸ್ಟಾರ್​​​ಏರ್ ವಿಮಾನ ಜನರಿಗೆ ತನ್ನ ಸೇವೆ ನೀಡಲಿದೆ‌.

inaugurates flight service between Kalaburagi & Tirupati
ಇಂದಿನಿಂದ ಕಲಬುರಗಿ ಮತ್ತು ತಿರುಪತಿ ವಿಮಾನಯಾನ ಆರಂಭ

By

Published : Jan 11, 2021, 2:28 PM IST

ಕಲಬುರಗಿ:ಕಲಬುರಗಿ ಮತ್ತು ತಿರುಪತಿ ನಡುವೆ ವಿಮಾನ ಸೇವೆಯನ್ನು ಕಲಬುರಗಿ ಸಂಸದ ಉಮೇಶ್ ಜಿ. ಜಾಧವ್ ಉದ್ಘಾಟಿಸಿದರು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಇನ್ಮುಂದೆ ಜಿಲ್ಲೆಯ ಜನ ಹರಸಾಹಸ ಪಡಬೇಕಾದ ಅವಶ್ಯಕತೆ ಇಲ್ಲ. ಇಂದಿನಿಂದ ವಿಮಾನ ಸೇವೆ ಲಭ್ಯವಾಗಲಿದೆ. ಆರಂಭಿಕವಾಗಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಹೀಗೆ ವಾರದಲ್ಲಿ ನಾಲ್ಕು ದಿನ ಸ್ಟಾರ್​​​ಏರ್ ವಿಮಾನ ಜನರಿಗೆ ತನ್ನ ಸೇವೆ ನೀಡಲಿದೆ‌.

" ಹೆಚ್ಚಿನ ಜನರು ಇಲ್ಲಿಂದ ಹೆಚ್ಚಾಗಿ ತಿರುಪತಿಗೆ ಪ್ರಯಾಣಿಸುತ್ತಾರೆ. ಇಂದಿನ ವಿಮಾನವು ಶೇ 80 ರಷ್ಟು ಉದ್ಯೊಗ ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಮುಂಬೈ, ದೆಹಲಿ ಮತ್ತು ಬೆಂಗಳೂರಿಗೆ ವಿಮಾನಯಾನ ನಿರ್ವಹಿಸಲು ಯೋಜಿಸುತ್ತಿದ್ದೇವೆ" ಎಂದು ಜಾಧವ್ ಹೇಳಿದರು.

ಓದಿ : ಪದವಿ, ಸ್ನಾತಕೋತ್ತರ‌ ಕೋರ್ಸ್​ಗಳಿಗೆ ಜ.15 ರಿಂದ‌ ಆಫ್​ಲೈನ್ ತರಗತಿ ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ

ಕಲಬುರಗಿಯಿಂದ ತಿರುಪತಿಗೆ ಹೋಗಲು 620 ಕಿ.ಮೀ ದೂರ. ಬಸ್, ರೈಲು ಮೂಲಕ ಸಂಚರಿಸಲು ಸುಮಾರು 11 ಗಂಟೆಗಳು ತಗುಲುತ್ತಿತ್ತು. ಆದರೀಗ ವಿಮಾನ ಸೇವೆಯಿಂದ ಕೇವಲ 1:05 ನಿಮಿಷದಲ್ಲಿ ತಿರುಪತಿಗೆ ತಲುಪಬಹುದಾಗಿದೆ. ಬೆಳಗ್ಗೆ 9:45 ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ತಿರುಪತಿಗೆ 1 ಗಂಟೆಯಲ್ಲಿ ಅಂದರೆ 11ಗಂಟೆಗೆ ತಲುಪಲಿದೆ. ಅಲ್ಲಿಂದ ವಾಪಸ್ ಮಧ್ಯಾಹ್ನ 2:25 ಕ್ಕೆ ತಿರುಪತಿಯಿಂದ ಕಲಬುರಗಿಗೆ ವಿಮಾನ ಹಾರಾಟ ಮಾಡಲಿದೆ. ಸ್ಟಾರ್​​​ಏರ್ ತಿರುಪತಿಗೆ ಸೇವೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ 999ರೂ. ಆರಂಭಿಕ ಟಿಕೆಟ್ ಆಫರ್ ನೀಡುತ್ತಿದೆ.

ABOUT THE AUTHOR

...view details