ಸೇಡಂ: ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜನ ರಸ್ತೆಗಿಳಿಯುತ್ತಿದ್ದು, ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಟ್ಟಂತಹ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಜನ ಪ್ರತಿನಿತ್ಯ ಓಡಾಡುವುದು ಸಾಮಾನ್ಯವಾಗಿದೆ. ಮೊದ ಮೊದಲು ಕಿರಾಣಿ ಅಂಗಡಿ, ಮೆಡಿಕಲ್ ಮತ್ತು ಹಣ್ಣು, ತರಕಾರಿ ಅಂಗಡಿ ತೆರೆದಿರುತ್ತಿದ್ದವು. ಈಗ ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್, ಜ್ಯುವೆಲ್ಲರಿ ಹೀಗೆ ಅನೇಕ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ಮಾಡುತ್ತಿವೆ. ಇದರಿಂದ ಜನರ ಸಂಚಾರವೂ ಜಾಸ್ತಿಯಾದಂತಾಗಿದೆ. ಪೊಲೀಸ್ ಇಲಾಖೆ ಕಲಬುರಗಿ ರಸ್ತೆ, ಬಸ್ ನಿಲ್ದಾಣ, ಪೊಲೀಸ್ ಠಾಣೆ ಬಳಿ ಜನರನ್ನು ತಡೆಯುವ ಯತ್ನ ನಡೆಸಿದೆಯಾದರೂ ಪ್ರತಿನಿತ್ಯ ಜನಸಂದಣಿ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ.