ಕಲಬುರಗಿ :ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಲೋಪದೋಷ ಕಂಡು ಬರುತ್ತಿವೆ ಎಂದು ಆರೋಪಿಸಿ ರಾಷ್ಟ್ರೀಯ ಬಸವ ದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಲೋಪದೋಷ ಆರೋಪ.. ಬಸವದಳದ ನೇತೃತ್ವದಲ್ಲಿ ಪ್ರತಿಭಟನೆ - Kalburagi Protest News
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಸವ ದಳ ಸಂಘಟನೆಯ ಕಾರ್ಯಕರ್ತರು, ಲಿಂಗಾಯತ ಪ್ರಮಾಣ ಪತ್ರ ಕೇಳಿದ್ರೆ ವೀರಶೈವ ಲಿಂಗಾಯತ ಎಂದು ನಮೂದು ಮಾಡಲಾಗ್ತಿದೆ..
ರಾಷ್ಟ್ರೀಯ ಬಸವ ದಳದ ನೇತೃತ್ವದಲ್ಲಿ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಸವ ದಳ ಸಂಘಟನೆಯ ಕಾರ್ಯಕರ್ತರು, ಲಿಂಗಾಯತ ಪ್ರಮಾಣ ಪತ್ರ ಕೇಳಿದ್ರೆ ವೀರಶೈವ ಲಿಂಗಾಯತ ಎಂದು ನಮೂದು ಮಾಡಲಾಗ್ತಿದೆ.
ಬೇರೆ ಜಾತಿಯವರಿಗೆ ಕೇಳಿದಂತೆಯೇ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಲಿಂಗಾಯತರಿಗೆ ಮಾತ್ರ ಪ್ರಮಾಣ ಪತ್ರ ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೂಡಲೇ ಲೋಪದೋಷ ಸರಿಪಡಿಸಿ ಲಿಂಗಾಯತ ಎಂದೇ ಜಾತಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.