ಕಲಬುರಗಿ:ರಾಜ್ಯದಲ್ಲಿ ಸಂಚಲನ ಮೂಡಿಸಿದ ಆಳಂದ ತಾಲೂಕಿನ 9 ನೇ ತರಗತಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಓರ್ವ ಅಪ್ರಾಪ್ತ ಬಾಲಕನ ಬಂಧನವಾಗಿದೆ. ಆದರು ನಗರದಲ್ಲಿ ಇಂದೂ ಇದೆ ಪ್ರಕರಣಕ್ಕೆ ಸಂಬಧಿಸಿ ಮಹಿಳಾ ಸಂಘಟನೆಗಳು ಬೀದಿಗೆ ಇಳಿದು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ನಗರದ ಸರ್ಧಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ.
ಒಬ್ಬ ಬಾಲಕ ಅತ್ಯಾಚಾರ ಕೊಲೆ ಮಾಡೋದು ಅಸಾಧ್ಯ: ಆರೋಪಿಗಳ ಬಂಧನಕ್ಕೆ ಮಹಿಳೆಯರ ಆಗ್ರಹ - A case of rape and murder of a minor girl
ರ‍್ಯಾಲಿ ನಡೆಸಿದ ಮಹಿಳೆಯರು, ಕೇವಲ ಓರ್ವ ಬಾಲಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಅನ್ನೋದು ನಂಬಲು ಅಸಾಧ್ಯವಾದ ಸಂಗತಿ.

ಬಾಲಕನೋರ್ವ ಅತ್ಯಾಚಾರಗೈದು ಕೊಲೆ ಮಾಡಲು ಅಸಾಧ್ಯ:ರ‍್ಯಾಲಿ ನಡೆಸಿದ ಮಹಿಳೆಯರು,ಕೇವಲ ಓರ್ವ ಬಾಲಕ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ ಎನ್ನೋದು ನಂಬಲು ಅಸಾಧ್ಯವಾದ ಸಂಗತಿ. ಬಾಲಕನೋರ್ವ ಅತ್ಯಾಚಾರಗೈದು ಕೊಲೆ ಮಾಡಲು ಅಸಾಧ್ಯ ಹಿಗಾಗಿ ಕೃತ್ಯದ ಹಿಂದೆ ಬಾಲಕ ಮಾತ್ರವಲ್ಲ ಇನ್ನೂ ಹಲವರ ಕೈವಾಡ ಇರುವಂತೆ ಕಂಡುಬರುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯು ತಕ್ಷಣವೇ ಈ ವಿಚಾರಣವಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕೃತ್ಯದ ಹಿಂದೆ ಇರುವ ಎಲ್ಲಾ ಆರೋಪಿಗಳ ಹೆಡೆಮೂರಿ ಕಟ್ಟಬೇಕೆಂದು ಮಹಿಳೆಯರು ಆಗ್ರಹಿಸಿದರು.
ಇದನ್ನೂ ಓದಿ:ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರಿಗೆ ಮರಣದಂಡನೆ ವಿಧಿಸಿ ಪೋಕ್ಸೊ ಕೋರ್ಟ್ ತೀರ್ಪು