ಕಲಬುರಗಿ:ಜಿಲ್ಲೆಯ ಚಿತ್ತಾಪುರ ಹೊರವಲಯದಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವುಗಳ ಚರ್ಮವನ್ನು ನಂದಿ ಪ್ರಾಣಿ ದಯಾ ಸಂಘದವರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ನೀಡಿದ್ದಾರೆ.
ಚಿತ್ತಾಪುರದಿಂದ ಹೈದರಾಬಾದ್ ಮೂಲಕ ಗೋವುಗಳ ಚರ್ಮವನ್ನು ಕೋಲ್ಕತ್ತಾಕ್ಕೆ ಸಾಗಿಸಲಾಗುತ್ತಿತ್ತು. ಇದರ ಖಚಿತ ಮಾಹಿತಿ ಪಡೆದ ನಂದಿ ಪ್ರಾಣಿ ದಯಾ ಸಂಘದವರು ಚಿತ್ತಾಪುರ ಹೊರವಲಯದಲ್ಲಿ ದಾಳಿ ನಡೆಸಿದ್ದಾರೆ.
14 ಚಕ್ರಗಳ ಬೃಹತ್ ಕಂಟೇನರ್‌ನಲ್ಲಿ ಅಕ್ರಮವಾಗಿ 32 ಟನ್‌ನಷ್ಟು ಗೋವುಗಳ ಚರ್ಮ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ದಾಳಿ ವೇಳೆ ಲಾರಿ ಮಾಲೀಕ, ಚಾಲಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಈ ವೇಳೆ ಚಿತ್ತಾಪುರ, ಶಹಾಬಾದ್ ಸುತ್ತಮುತ್ತಲಿನ ಕಸಾಯಿ ಕಾರ್ಖಾನೆಗಳಿಂದ ಚರ್ಮ ಸಂಗ್ರಹಿಸಿಡಲಾಗಿತ್ತು ಎಂದು ಬಂಧಿತರು ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಸಮಾಜದಲ್ಲಿ ಪರಿವರ್ತನೆಯನ್ನು ತಂದ ಕೀರ್ತಿ ಹಾನಗಲ್ ಶಿವಕುಮಾರ ಸ್ವಾಮೀಜಿಗೆ ಸಲ್ಲುತ್ತದೆ : ಬಿಎಸ್ವೈ