ಕರ್ನಾಟಕ

karnataka

ಅಕ್ರಮವಾಗಿ ಜಾಗ ಒತ್ತುವರಿ: ಮಳಿಗೆಗಳ ನಿರ್ಮಾಣ

By

Published : Sep 2, 2020, 7:33 PM IST

ನಗರದ ಪ್ರಮುಖ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಮಳಿಗೆಗಳನ್ನು ನಿರ್ಮಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

Illegal shop opening in government premises
ಕಲಬುರಗಿಯಲ್ಲಿ ಅಕ್ರಮವಾಗಿ ಜಾಗ ಒತ್ತುವರಿ

ಕಲಬುರಗಿ: ದಿನೇ, ದಿನೇ ಬೆಳೆಯುತ್ತಿರುವ ಕಲಬುರಗಿ ನಗರ ಹಾಗೂ ಜಿಲ್ಲೆಯಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಇಲ್ಲಿನ ವ್ಯಾಪಾರ, ವಹಿವಾಟು ಕೂಡಾ ಜೋರಾಗಿದೆ.

ಕಲಬುರಗಿಯಲ್ಲಿ ಅಕ್ರಮವಾಗಿ ಜಾಗ ಒತ್ತುವರಿ

ನಗರದ ಪ್ರಮುಖ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಸುತ್ತಮುತ್ತಲಿನ ಮಳಿಗೆಗಳಿಗೆ ಭಾರಿ ಬೇಡಿಕೆ ಬಂದಿದೆ. ಇದರಿಂದ ಬಾಡಿಗೆ ಕೂಡ ಹೆಚ್ಚಾಗುತ್ತಿದೆ. ಇನ್ನೂ ಹೃದಯ ಭಾಗದಲ್ಲಿರುವ ಸರ್ಕಾರಿ ಖಾಲಿ ಜಾಗವನ್ನು ಕೆಲವರು ಕಬಳಿಸಿಕೊಂಡಿದ್ದಾರೆ ಎಂದು ದೂರಲಾಗಿದೆ‌. ಹಳೆ ಕೋರ್ಟ್ ಮತ್ತು ಅರಣ್ಯ ಇಲಾಖೆ ಪಕ್ಕದ ಉದ್ಯಾನ ವನಕ್ಕಾಗಿ ಮೀಸಲಿಟ್ಟಿರುವ ಸ್ಥಳದಲ್ಲಿಯೇ ಅಕ್ರಮವಾಗಿ ಟೀನ್ ಶೇಡ್ ನಿರ್ಮಿಸಿಕೊಳ್ಳಲಾಗಿದೆ.

ಸದ್ಯ ಅಕ್ರಮ ಜಾಗದಲ್ಲಿ ಝೇರಾಕ್ಸ್ ಅಂಗಡಿ, ಹಣ್ಣಿನ ಅಂಗಡಿ, ಹೋಟೆಲ್​ಗಳನ್ನ ಹಾಕಿಕೊಂಡು, ವ್ಯಾಪಾರ ನಡೆಸಲಾಗುತ್ತಿದೆ. ಇನ್ನೂ ಕೆಲವರು ಟೀನ್ ಶೇಡ್ ನಿರ್ಮಿಸಿ ಬಾಡಿಗೆಗೆ ಕೂಡಾ ನೀಡಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಮೊದಲು ಈ ಖಾಲಿ ಜಾಗ ಗೋಮಾಳ ಜಾಗವಾಗಿತ್ತು ಎನ್ನಲಾಗಿದೆ. ನಂತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ಯಾನ ವನಕ್ಕಾಗಿ ಮೀಸಲಿಡಲಾಗಿದೆ ಅನ್ನೋದು ಮಹಾನಗರ ಪಾಲಿಕೆಯ ಮೂಲಗಳ ಮಾಹಿತಿಯಾಗಿದೆ.

ಹೀಗಾಗಿ ಎರಡು ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ ಯಾರು ಕ್ರಮ ತೆಗೆದುಕೊಂಡಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಪ್ರಭಾವಿಗಳು ಸರ್ಕಾರಿ ಖಾಲಿ ಜಾಗದಲ್ಲಿ ಅಕ್ರಮವಾಗಿ ಅಂಗಡಿಗಳನ್ನ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ABOUT THE AUTHOR

...view details