ಕಲಬುರಗಿ: ಹತ್ತಿ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯನ್ನು ಜೇವರ್ಗಿ ತಾಲೂಕಿನ ನೇಲೊಗಿ ಠಾಣೆ ಪೊಲೀಸರು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಎಲಾ ಇವ್ನಾ,, ಹತ್ತಿ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆ.. ಪೊಲೀಸರಿಂದ ಆರೋಪಿ ಬಂಧನ - ಕಲಬುರಗಿಯಲ್ಲಿ ಅಕ್ರಮ ಗಾಂಜಾ ವಶ ಸುದ್ದಿ
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ನೆಲೋಗಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ಗಾಂಜಾ ಬೆಳೆ
ಜೇರಟಗಿ ಗ್ರಾಮದ ನಿವಾಸಿ ಗುರಪ್ಪ ಬಂಧಿತ ಆರೋಪಿ. ಈತನಿಂದ ಲಕ್ಷಾಂತರ ಮೌಲ್ಯದ 20 ಕೆಜಿಯಷ್ಟು ಗಾಂಜಾ ಜಪ್ತಿ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಗುರಪ್ಪ ತನ್ನ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ನೆಲೋಗಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.