ಕಲಬುರಗಿ: ಲಾಕ್ಡೌನ್ ಸಂದರ್ಭದಲ್ಲಿಯೇ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಲಾಕ್ಡೌನ್ ವೇಳೆ ಅಕ್ರಮವಾಗಿ ಜಾನುವಾರು ಸಾಗಾಟ: ಕಲಬುರಗಿಯಲ್ಲಿ ಇಬ್ಬರ ಬಂಧನ - illegal cattle trafficking in kalburgi
ಕಲಬುರಗಿಯ ಆಳಂದ ಚೆಕ್ ಪೋಸ್ಟ್ನಿಂದ ಚಿಂಚೋಳಿ ಕಡೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರಗಳನ್ನು ವಶಕ್ಕೆ ಪಡೆಯಲಾಗಿದೆ. ವಾಹನ ಸಮೇತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
![ಲಾಕ್ಡೌನ್ ವೇಳೆ ಅಕ್ರಮವಾಗಿ ಜಾನುವಾರು ಸಾಗಾಟ: ಕಲಬುರಗಿಯಲ್ಲಿ ಇಬ್ಬರ ಬಂಧನ illegal cattle trafficking in kalburgi](https://etvbharatimages.akamaized.net/etvbharat/prod-images/768-512-6799723-228-6799723-1586936741256.jpg)
ಲಾಕ್ಡೌನ್ ವೇಳೆ ಅಕ್ರಮ ಜಾನುವಾರು ಸಾಗಾಟ
ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಕೇಶವ ಮೋಟಗಿ ನೀಡಿದ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, 5 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಮೂರು ಹೋರಿ, ಒಂದು ಆಕಳು ಮತ್ತು ಒಂದು ಕೋಣ ಸೇರಿದೆ.
ಆಳಂದ ಚೆಕ್ ಪೋಸ್ಟ್ನಿಂದ ಚಿಂಚೋಳಿ ಕ್ರಾಸ್ ಕಡೆ ಕಸಾಯಿಖಾನೆಗೆ ಸಾಗಿಸುವ ಸಂದರ್ಭದಲ್ಲಿ ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನದ ಪರವಾನಗಿ ಇಲ್ಲದೆಯೇ ಸಾಗಾಟ ಮಾಡುತ್ತಿದ್ದ ವೇಳೆ ಲಂಗರ್ ಹನುಮಾನ ಮಂದಿರದ ಬಳಿ ವಶಕ್ಕೆ ಪಡೆಯಲಾಯಿತು. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.