ಕಲಬುರಗಿ: ಕಾಂಗ್ರೆಸ್ ಪಕ್ಷ ಈಗ ಹೀನಾಯ ಸ್ಥಿತಿಯಲ್ಲಿದೆ. ಹೀಗಿರುವಾಗ ನಾನು ಬಿಜೆಪಿ ಬಿಡುವ ಮಾತೇ ಇಲ್ಲ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ನಾನು ಬಿಜೆಪಿ ಬಿಡುವ ಮಾತೇ ಇಲ್ಲ: ಮಾಜಿ ಸಚಿವ ಚಿಂಚನಸೂರ್ - Baburao Chinchanasur news
ಕಾಂಗ್ರೆಸ್ನಲ್ಲಿ ಲೀಡರ್ ಶಿಪ್ಗಾಗಿ ಪೈಪೋಟಿ ನಡೆದಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರ ನಡುವೆಯೂ ವೈಮನಸ್ಸಿದೆ. ನನಗೆ ಅನ್ಯಾಯವಾಗಿದ್ದರಿಂದಲೇ ಬಿಜೆಪಿ ಸೇರಿದ್ದೇನೆ. ನಾನು ಬಿಜೆಪಿ ಬಿಡುವುದು ಸುಳ್ಳು ಸುದ್ದಿ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಲೀಡರ್ ಶಿಪ್ಗಾಗಿ ಪೈಪೋಟಿ ನಡೆದಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರ ನಡುವೆಯೂ ವೈಮನಸ್ಸಿದೆ. ಕಾಂಗ್ರೆಸ್ನಲ್ಲಿ ನನಗೆ ಅನ್ಯಾಯವಾಗಿದ್ದರಿಂದಲೇ ಬಿಜೆಪಿ ಸೇರಿದ್ದೇನೆ. ನಾನು ಬಿಜೆಪಿ ಬಿಡುವುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋಲಿ ಸಮಾಜಕ್ಕೆ ಎಸ್.ಟಿ. ಮೀಸಲಾತಿ ಕೊಡಿಸುತ್ತೇನೆ. ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆಯಾಗುವ ಕಾಲ ಹತ್ತಿರವಾಗಿದೆ. ಈಗಾಗಲೇ ತಳವಾರ, ಪರಿವಾರ ಎಸ್ಟಿಗೆ ಸೇರ್ಪಡೆಯಾಗಿವೆ. ಮುಂದಿನ ದಿನಗಳಲ್ಲಿ ಉಳಿದ ಕೋಲಿ, ಕಬ್ಬಲಿಗವೂ ಎಸ್ಟಿಗೆ ಸೇರ್ಪಡೆಯಾಗಲಿದೆ ಎಂದು ಚಿಂಚನಸೂರ ತಿಳಿಸಿದ್ದಾರೆ.