ಕಲಬುರಗಿ:ಹೈದರಾಬಾದ್ ಕರ್ನಾಟಕದಲ್ಲಿರುವ ಐದು ವಿಶ್ವವಿದ್ಯಾಲಯಗಳಿಗೆ ಈ ಭಾಗದವರನ್ನು ಪರಿಗಣಿಸದೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಆರೋಪಿಸಿದೆ.
ಕುಲಪತಿಗಳ ನೇಮಕದಲ್ಲಿ ಹೈ.ಕ ಭಾಗದವರ ಕಡೆಗಣನೆ: ಜನಪರ ಸಂಘರ್ಷ ಸಮಿತಿ ಆರೋಪ - Hyderabad Karnataka university's
ಹೈದರಾಬಾದ್ ಕರ್ನಾಟಕ ಭಾಗದ ವಿಶ್ವವಿದ್ಯಾನಿಲಯಗಳಿಗೆ ಬೇರೆ ಜಿಲ್ಲೆಗಳ ಕುಲಪತಿಗಳನ್ನು ನೇಮಕ ಮಾಡುವುದರ ಮೂಲಕ ಈ ಭಾಗದವರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ವಿಶ್ವವಿದ್ಯಾನಿಲಯಗಳು ಅಭಿವೃದ್ಧಿಯಲ್ಲಿ ಕುಂಠಿತಗೊಂಡಿವೆ ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಆರೋಪಿಸಿದೆ.
ಜನಪರ ಸಂಘರ್ಷ ಸಮಿತಿ ಆರೋಪ
ಕಲಬುರಗಿಯಲ್ಲಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ಹೈದರಾಬಾದ್ ಕರ್ನಾಟಕ ಭಾಗದ ವಿಶ್ವವಿದ್ಯಾಲಯಗಳಿಗೆ ಬೆಂಗಳೂರು ಮತ್ತು ಮೈಸೂರು ಭಾಗದವರನ್ನು ಕುಲಪತಿಗಳನ್ನಾಗಿ ನೇಮಿಸಲಾಗುತ್ತಿದೆ. ಈ ಭಾಗದ ಪ್ರೊಫೆಸರ್ಗಳು ಕುಲಪತಿಯಾಗಲು ಅರ್ಹರಿಲ್ಲವೆ. ಉದ್ದೇಶಪೂರ್ವಕವಾಗಿಯೇ ಈ ಭಾಗಕ್ಕೆ ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿದರು.
ಇನ್ನು ಮುಂದೆಯಾದರೂ ಗುಲ್ಬರ್ಗಾ ವಿವಿ ಸೇರಿದಂತೆ ಐದು ವಿವಿಗಳ ಕುಲಪತಿಗಳ ನೇಮಕ ಸಂದರ್ಭದಲ್ಲಿ ಈ ಭಾಗದವರನ್ನೇ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.